Kannada NewsKarnataka NewsLatest

ಬೆಳಗಾವಿ: ಕರಡಿಗುದ್ದಿ ಗ್ಯಾಂಗ್ ವಾರ್ 4 ಜನ ಅರೆಸ್ಟ್

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ – 

ತಾಲೂಕಿನ ಕರಡಿಗುದ್ದಿಯಲ್ಲಿ ಗುರುವಾರ ಸಂಜೆ ಓರ್ವನ ಸಾವಿಗೆ ಕಾರಣವಾಗಿದ್ದ ಎರಡು ಗುಂಪುಗಳ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೊಡ್ಡ ಗಂಗಪ್ಪ ಅರಬಳ್ಳಿ, ಲಕ್ಕಪ್ಪ ಬಸಪ್ಪ ಹಳ್ಳಿ, ಬಸಂತ ಬಸವಣ್ಣಿ ಕರವಿನಕೊಪ್ಪ ಹಾಗೂ ಬರಮೋಜಿ ಗಂಗಪ್ಪ ಅರಬಳ್ಳಿ ಬಂಧಿತ ಆರೋಪಿಗಳು.

ಕರಡಿಗುದ್ದಿಯಲ್ಲಿ ಗುರುವಾರ ಸಂಜೆ ಭಯಾನಕ ರೀತಿಯಲ್ಲಿ ಎರಡು ಗುಂಪುಗಳ ಯುವಕರು ಮಚ್ಚು ಕತ್ತಿ ಮೊದಲಾದ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಇದರಲ್ಲಿ ಮುದುಕಪ್ಪ ಅಂಗಡಿ (೨೫) ಎಂಬ ಯುವಕ ಮೃತಪಟ್ಟು ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಆರೋಪಿಗಳನ್ನು ಬಂಧಿಸಿರುವುದಾಗಿ ಡಿಸಿಪಿ ರವೀಂದ್ರ ಗಡಾದಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಬಳಿ ಗುಂಪು ಘರ್ಷಣೆ: ಓರ್ವ ಸಾವು, 7 ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button