ನಾಲ್ವರು ನಟಿಯರನ್ನು ರಾಜಕಾರಣಿಗಳ ಹನಿ ಟ್ರ್ಯಾಪ್ ಗಾಗಿ ಮಿಲಿಟರಿ ಬಳಸಿದೆ ಎಂದ ಮಾಜಿ ಸೇನಾಧಿಕಾರಿ; ಮೂವರಿಂದ ಖಾರ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿ, ಕರಾಚಿ: ನಾಲ್ವರು ನಟಿಯರನ್ನು ಮಿಲಿಟರಿ ಹನಿಟ್ರ್ಯಾಪ್ ಗಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದ ಮಾಜಿ ಸೇನಾಧಿಕಾರಿಗೆ ಮೂವರು ನಟಿಯರು ಖಾರ ಪ್ರತಿಕ್ರಿಯೆ ಮೂಲಕ ತಪರಾಕಿ ನೀಡಿದ್ದಾರೆ.
ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿ ಆದಿಲ್ ರಾಜಾ ಇತ್ತೀಚೆಗೆ MH, MK, KK, SA ಎಂಬ ಮೊದಲಕ್ಷರಗಳನ್ನು ಹೊಂದಿರುವ ನಾಲ್ವರು ನಟಿಯರನ್ನು ರಾಜಕಾರಣಿಗಳನ್ನು ಹನಿ ಟ್ರ್ಯಾಪಿಂಗ್ ಮಾಡಲು ದೇಶದ ಮಿಲಿಟರಿ ಬಳಸಿದೆ ಎಂದು ತಮ್ಮ ಚಾನಲ್ ನಲ್ಲಿ ವಿಡಿಯೊ ಒಂದರ ಮೂಲಕ ಹೇಳಿದ್ದರು. ಕೆಲವು ಪಾಕಿಸ್ತಾನಿ ನಟಿಯರು ಮತ್ತು ಮಾಡೆಲ್‌ಗಳು ಜನರಲ್ (ನಿವೃತ್ತ) ಬಜ್ವಾ ಮತ್ತು ಮಾಜಿ ISI ಮುಖ್ಯಸ್ಥ ಫೈಜ್ ಹಮೀದ್ ಅವರೊಂದಿಗೆ ರಾಜಕಾರಣಿಗಳನ್ನು ಬಲೆಗೆ ಬೀಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಸಹಜವಾಗೇ ಪಾಕಿಸ್ತಾನದಲ್ಲಿ ಸದ್ಯ ಬೇಡಿಕೆಯ ನಟಿಯರಾದ ಮೆಹ್ವಿಶ್ ಹಯಾತ್, ಮಹಿರಾ ಖಾನ್ ಕುಬ್ರಾ ಖಾನ್ ಮತ್ತು ಸಜಲ್ ಅಲಿ ಅವರ ಹೆಸರುಗಳು ಜನರ ಮನಸ್ಸಿನಲ್ಲಿ ಮೂಡುವಂತೆ ಈ ವಿಡಿಯೊ ಕೆಲಸ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ, ಬಾಲಿವುಡ್ ನಲ್ಲೂ ಶ್ರೀದೇವಿ ಅವರೊಂದಿಗೆ ನಟಿಸಿರುವ ಸಜಲ್ ಅಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ರಾಜಾ ಅವರ ವೀಡಿಯೊವನ್ನು ಉಲ್ಲೇಖಿಸದೆ, “ನಮ್ಮ ದೇಶ ನೈತಿಕವಾಗಿ ಅಧಃಪತನ ಮತ್ತು ಕೊಳಕಾಗುತ್ತಿರುವುದು ತುಂಬಾ ದುಃಖಕರವಾಗಿದೆ; ಚಾರಿತ್ರ್ಯಹತ್ಯೆ ಮಾನವೀಯತೆ ಮತ್ತು ಪಾಪದ ಕೆಟ್ಟ ರೂಪವಾಗಿದೆ.” ಎಂದು ಪ್ರತಿಕ್ರಿಯಿಸಿದ್ದಾರೆ.
ಕುಬ್ರಾ ಖಾನ್ ಅವರು ರಾಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಮೆಹ್ವಿಶ್ ಕೂಡ ಸಾರ್ವಜನಿಕವಾಗಿ ಹೊರಬರಲು ನಿರ್ಧರಿಸಿದ್ದು, ರಾಜಾ ಅವರ ಆರೋಪಗಳು ಆಧಾರರಹಿತ. ಈ ರೀತಿ ನನ್ನ ಹೆಸರನ್ನು ಮಾನಹಾನಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. “ಅಗ್ಗದ ಪ್ರಚಾರಕ್ಕೆ ಕೆಲವರು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಅದನ್ನು ನಂಬಿ ಟ್ರೋಲ್ ಮಾಡುತ್ತಿರುವುದು ಅವಮಾನಕರ” ಎಂದು ಅವರು ಹೇಳಿಕೊಂಡಿದ್ದಾರೆ.
“ಇದು ಯಾವುದೇ ಆಲೋಚನೆಯಿಲ್ಲದೆ ಈ ಗಟಾರ ಪತ್ರಿಕೋದ್ಯಮವನ್ನು ಹಾಳುಮಾಡುವ ನಮ್ಮ ಸಮಾಜದ ಅನಾರೋಗ್ಯವನ್ನು ತೋರಿಸುತ್ತದೆ. ಇನ್ನು ಮುಂದೆ ಇದು ನಿಶ್ಚಿತವಾಗಿ ನಿಲ್ಲುತ್ತದೆ. ಇನ್ನು ಮುಂದೆ ನನ್ನ ಹೆಸರನ್ನು ಈ ರೀತಿ ದೂಷಿಸಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ!” ಎಂದು ಕೂಡ ಅವರು ಹೇಳಿದ್ದಾರೆ.
ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿ ಆದಿಲ್ ರಾಜಾ ಈಗ ಯೂಟ್ಯೂಬರ್ ಆಗಿದ್ದು, ಸುಮಾರು 3 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರು `ಸೋಲ್ಜರ್ ಸ್ಪೀಕ್ಸ್’ ಹೆಸರಿನಲ್ಲಿ ತಮ್ಮ ಚಾನೆಲ್ ನಡೆಸುತ್ತಿದ್ದಾರೆ.
ಇಂದು ಸಂಜೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸಂಸ್ಮರಣ ಸಭೆ
https://pragati.taskdun.com/memorial-meeting-of-shri-siddeshwar-swami-this-evening/
https://pragati.taskdun.com/siddaramaiahshreeramulucm-basavaraj-bommai/
https://pragati.taskdun.com/nalin-kumar-kateellove-jihadstatmentd-k-shivakumarmangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ