Belagavi NewsBelgaum NewsCrimeKannada NewsKarnataka NewsLatest

*ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ನಾಲ್ವರು ಕಳ್ಳರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನವರಿ 20 ರಂದು ಸವದತ್ತಿ ತಾಲೂಕಿನ ಅವರಾಧಿ ಗ್ರಾಮದ ಮುದ್ದೂರಮ್ಮ ಮತ್ತು ಶ್ರೀ ಶೆಟ್ಟೆಮ್ಮ ದೇವಿ ದೇವಸ್ಥಾನದ ಬಾಗಿಲ ಕೀಲಿ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ದೇವರ ಮೂರ್ತಿಯ ಮೇಲೆ ಇದ್ದ 90,000 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡೊದ ಬಗ್ಗೆ ಕುಲಗೋಡ ಠಾಣೆಯ ಅಪರಾಧ ಸಂಖ್ಯೆ 23/2026 ಕಲಂ 305, 331(4) ಬಿಎನ್‌ಎಸ್ ಅಡಿ ಪ್ರಕರಣಕ್ಕೆ ದಾಖಾಗಿತ್ತು. 

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಭೀರಪ್ಪ ಹನಮಂತಪ್ಪ ಕತ್ತಿ (36), ಬಸವರಾಜ ಭೀಮಪ್ಪ ತಳವಾರ (35),ವಬರಮಪ್ಪ ಸಂಗಪ್ಪ ಲಗಳಿ (39) ಹಾಗೂ ವಿಲಾಸ ಲಕ್ಷ್ಮಣ ರಸಾಳ (34) ಎಂಬ ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ. 

ಆರೋಪಿಗಳ ಬಳಿ ಈ ಪ್ರಕರಣದಲ್ಲಿ ಕಳುವಾದ 90 ಸಾವಿರ ಮೌಲ್ಯದ 10ಗ್ರಾಂ ಬಂಗಾರದ ಆಭರಣಗಳು, ಮುರಗೋಡ ಪೊಲೀಸ್ ಠಾಣೆ ಅಪರಾದ ಸಂಖ್ಯೆ: 08/2026 ಕಲಂ: 305, 331(4) ಬಿ.ಎನ್.ಎಸ್-2023 ಪ್ರಕರಣದಲ್ಲಿ ಕಳುವಾದ 1.29,000 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, ಮುರಗೋಡ 26/2026 ಕಲಂ: 305, 331(4) ಬಿ.ಎನ್.ಎಸ್-2023 ಪ್ರಕರಣದಲ್ಲಿ ಕಳವು ಆದ 95.900 ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಸವದತ್ತಿ ಪೊಲೀಸ್ ಠಾಣೆ ಅಪರಾದ ಸಂಖ್ಯೆ: 50/2026 ಕಲಂ: 305, 331(4) ಬಿ.ಎನ್.ಎಸ್-2023 ಪ್ರಕರಣದಲ್ಲಿ ಕಳುವಾದ 1.20,000 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳು ವಶಕ್ಕೆ ಪಡೆಯಲಾಗಿದೆ.

Home add -Advt

ಜೊತೆಗೆ ಕಳ್ಳರ ಬಳಿ ಇದ್ದ 3.00.000  ರೂ ಮೌಲ್ಯದ 5 ಬೈಕ್ ಆಭರಣಗಳನ್ನು ಕಳವು ಮಾಡಲು ಬಳಸಿದ 1,50,000 ರೂ ಮೌಲ್ಯದ ಕಾರ್ ಸೀಜ್ ಮಾಡಿದ್ದಾರೆ.‌

ಒಟ್ಟು 8.84.900 ರೂ ಮೌಲ್ಯದ ವಸ್ತುಗಳು ವಶಪಡಿಸಿಕೊಂಡು 4 ಪ್ರಕರಣಗಳನ್ನು ಬೇಧಿಸಿ ನಾಲ್ವರು ಆರೋಪಿತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

Related Articles

Back to top button