ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ವರು ಯುವತಿಯರು!

ಪ್ರಗತಿವಾಹಿನಿ ಸುದ್ದಿ, ಚಂಡೀಗಡ: ಸಾಮಾನ್ಯವಾಗಿ ಪುರುಷರು ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಕರಣಗಳೇ ಹೆಚ್ಚು. ಆದರೆ ಇಲ್ಲೊಂದು ವ್ಯತಿರಿಕ್ತ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ.

ಅರಣ್ಯ ಪ್ರದೇಶದಲ್ಲಿ ನಾಲ್ವರು ಯುವತಿಯರು ಮಾದಕ ದ್ರವ್ಯ ನೀಡಿ ಯುವಕನ ಮೇಲೆ  ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪಂಜಾಬ್‌ನ ಜಲಂಧರ್ ನಲ್ಲಿ ನಡೆದಿದೆ.

Home add -Advt

ಕಪುರ್ತಲಾ ರಸ್ತೆಯ ಬಳಿ ಮನೆಗೆ ತೆರಳುತ್ತಿದ್ದ ತನ್ನ ಬಳಿ ಯುವತಿಯರು ವಿಳಾಸ ಕೇಳಿದರು. ವಿಳಾಸ ಹೇಳುತ್ತಿದ್ದ ವೇಳೆ ಕಣ್ಣಿಗೆ ಏನನ್ನೋ ಎರಚಿ ತಾನು ಪ್ರಜ್ಞಾಹೀನನಾದ ಬಳಿಕ ತಮ್ಮ ಕಾರಿನಲ್ಲಿ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಬಳಿಕ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಸಂತ್ರಸ್ತ ವ್ಯಕ್ತಿ ಹೇಳಿಕೊಂಡಿದ್ದಾನೆ.

ಪಾನಮತ್ತರಾಗಿದ್ದ ನಾಲ್ವರು ಯುವತಿಯರು ಸರಣಿಯಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ತನಗೂ ಬಲವಂತದಿಂದ ಮದ್ಯ ಕುಡಿಸಿ ಹಲ್ಲೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಳಿಕ ತನ್ನನ್ನು ನಗರದಲ್ಲಿ ಬಿಟ್ಟು ಯುವತಿಯರು ಪರಾರಿಯಾಗಿದ್ದಾರೆ ಎಂದು ಹೇಳಿಕೊಂಡ ಯುವಕ ತನಗೆ ನ್ಯಾಯ ಒದಗಿಸುವಂತೆ ಮಾಧ್ಯಮಗಳೆದುರು ಕೋರಿದ್ದಾನೆ.

ಈ ಘಟನೆ ಕುರಿತು ಪಂಜಾಬ್ ಪೊಲೀಸ್ ಗುಪ್ತಚರ ಇಲಾಖೆ ಸ್ವಯಂಪ್ರೇರಿತ ತನಿಖೆ ಪ್ರಾರಂಭಿಸಿದೆ. ಆದರೆ ಈ ಬಗ್ಗೆ ಯಾವುದೇ ವ್ಯಕ್ತಿ ರೀತಿ ದೂರು ನೀಡಿಲ್ಲ. ತನ್ನ ಮೇಲೆ ನಡೆದಿರುವ ಅತ್ಯಾಚಾರ ದೌರ್ಜನ್ಯದ ಬಗ್ಗೆ ಆತ ಮಾಧ‍್ಯಮಗಳಿಗೆ ಮಾಹಿತಿ ನೀಡಿದ್ದಾನೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.

*ಮಾಜಿ ಶಿಕ್ಷಣ ಸಚಿವ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ಇನ್ನಿಲ್ಲ*

https://pragati.taskdun.com/ex-ministerdr-heggappa-deshappa-lamanideath/

4 ಕಡೆಯಿಂದ ಬಿಜೆಪಿ ರಥಯಾತ್ರೆ – ಬೊಮ್ಮಾಯಿ ಮಾಹಿತಿ

https://pragati.taskdun.com/bjp-rathayatra-from-4-places/

ಡಾ.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪ್ರಥಮ ವಿಜೇತರಿಗೆ 5 ಲಕ್ಷ ರೂ. ಬಹುಮಾನ

https://pragati.taskdun.com/dr-ambedkar-competitive-examination-first-winner-5-lakh-rs-reward/

Related Articles

Back to top button