
ಇಬ್ಬರು ಖದೀಮರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿ: ಖದೀಮರು, ವಂಚಕರಿಗೆ ಕಾನೂನು ಭಯವೂ ಇಲ್ಲ, ಪೊಲೀಸರ ಭೀತಿಯೂ ಇಲ್ಲ. ಇಲ್ಲಿಬ್ಬರು ವಂಚಕರು ಹೈಕೋರ್ಟ್ ಆದೇಶವನ್ನು ನಕಲು ಮಾಡಿ ಲಕ್ಷ ಲಕ್ಷ ಹಣ ವಂಚಿಸುತ್ತಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹೈಕೋರ್ಟ್ ಆದೇಶವನ್ನು ನಕಲು ಮಾಡಿ ಅದೇ ರೀತಿಯ ಆದೇಶದ ಪ್ರತಿ ತಯಾರಿಸಿ ವಂಚನೆ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಆರೋಪಿಗಳು. ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ಮೂಲದ ವಿಜೇತ್ ಹಾಗೂ ಲೋಹಿತ್ ಬಂಧಿತ ಆರೋಪಿಗಳು. ಕೋರ್ಟ್ ಆದೇಶ ಪ್ರತಿ ನಕಲು ಮಾಡಿ ಲೋಹಿತ್ ಎಂಬಾತ ತನ್ನ ಗರ್ಲ್ ಫ್ರೆಂಡ್ ಗೆ ವಂಚನೆ ಮಾಡಿದ್ದ. ಇನ್ನೋರ್ವ ವಿಜೇತ್ ಎಂಬಾತ ಹೈಕೋರ್ಟ್ ಇಡಿಗೆ ನೀಡಿದ್ದ ಆದೇಶ ವೊಂದರ ಪ್ರತಿಯನ್ನು ನಕಲು ಮಾಡಿ ಇಡಿಯಿಂದ ಸೀಜ್ ಆಗಿದ್ದ ಹಣವನ್ನು ತಮಗೆ ಹಿಂತಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ ಎಂಬ ರೀತಿಯಲ್ಲಿ ಬಿಂಬಿಸಿ ಹಣ ಬಿಡಿಸಿಕೊಳ್ಳಲು ನಮಗೆ ಸ್ವಲ್ಪ ಹಣ ಬೇಕೆಂದು ಹಲವರ ಬಳಿಯಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುತ್ತಿದ್ದ.
ಇದೀಗ ಇಬ್ಬರು ಖದೀಮರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ