ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಮಾಜಿ ಸಚಿವ ವರ್ತೂರು ಪ್ರಕಾಶ್, ಆಕೆ ತಮಗೆ ನೀಡಿದ್ದ ಗಿಫ್ಟ್ ಗಳನ್ನು ವಾಪಾಸ್ ಕೊಟ್ಟಿದ್ದಾರೆ.
ವಂಚನೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ವರ್ತೂರು ಪ್ರಕಾಶ್ ಇಂದು ಭಾರತಿ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಎಸಿಪಿ ಗೀತಾ ವರ್ತೂರು ಪ್ರಕಾಶ್ ಅವರ ವಿಚಾರಣೆ ನಡೆಸಿದ್ದು, ಹಲವು ವಿಷಯಗಳನ್ನು ವರ್ತೂರು ಪ್ರಕಾಶ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್ ಗಳನ್ನು ವಾಪಾಸ್ ನೀಡಿದ್ದಾರೆ. ಒಟ್ಟು 12.50 ಲಕ್ಷ ನಗದು ಹಣ, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶ್ವೇತಾ ಗೌಡ 6 ತಿಂಗಳ ಹಿಂದಷ್ಟೇ ಪರಿಚಯ. ಆಕೆಗೆ ನನಗೆ ಯಾವುದೇ ಸಂಬಂಧವಿಲ್ಲ, ಸ್ನೇಹಿತೆಯೂ ಅಲ್ಲ. ಆಕೆ ಹೀಗೆ ಮಾಡುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ. ಗಿಫ್ಟ್ ಅಂತ ಶ್ವೇತಾ ಗೌಡ ನನಗೆ ಕೆಲ ಒಡವೆ ನೀಡಿದ್ದಳು ಎಂದಿದ್ದಾರೆ ಎನ್ನಲಾಗಿದೆ.
ವಿಚಾರಣೆ ಬಳಿಕ ಮಾತನಾಡಿದ ವರ್ತೂರು ಪ್ರಕಾಶ್, ನಮ್ಮ ಮನೆಗೆ ಹಲವು ಸಾರ್ವಜನಿಕರು ಬರುತ್ತಾರೆ. ಹಾಗೇ ಶ್ವೇತಾ ಗೌಡ ಕೂಡ ಬಂದಿದ್ದಳು. ಐದಾರು ತಿಂಗಳ ಹಿಂದಷ್ಟೇ ಆಕೆ ಪರಿಚಯ. ಈಗ ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಖರೀದಿ ಮಾಡಿದ್ದಾಳೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಾಭರಣವನ್ನು ಆಕೆಗೆ ಕೊಟ್ಟಿದ್ದಾರೆ. ಹ್ಯಾಗೆ ಕೊಟ್ರು ಗೊತ್ತಿಲ್ಲ. ನನನಗೆ ಮಾಡಿದಂತೆ ಹಲವು ರಾಜಕಾರಣಿಗಳಿಗೆ ಹಲವರಿಗೆ ಹೀಗೆ ಮಾಡಿದ್ದಾಳೆ. ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ