*ಮದುವೆಯಾಗುವುದಾಗಿ ನಂಬಿಸಿ ಯುವಕರಿಂದ ಹಣ ದೋಚಿ ಪರಾರಿ: ಐಷಾರಾಮಿ ಜೀವನಕ್ಕಾಗಿ ಖತರ್ನಾಕ್ ಐಡಿಯಾ; ಮಹಿಳೆ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಐಷಾರಾಮಿ ಜೀವನಕ್ಕಾಗಿ ಯುವಕರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಯಿಸಿಕೊಳ್ಳುತ್ತಿದ್ದ ಮಹಿಳೆ ಯುವಕರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದಳು. ಈಕೆಯಿಂದ ಮೋಸ ಹೋದ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಕೋಮಲಾ ಬಂಧಿತ ಮಹಿಳೆ. 2017ರಲ್ಲಿ ಪತಿಯನ್ನು ಕಳೆದುಕೊಂಡಿದ್ದ ಕೋಮಲಾ, ತನ್ನ ಐಷಾರಾಮಿ ಜೀವನಕ್ಕಾಗಿ ಹಣದೋಚುವ ಐಡಿಯಾ ಮಾಡಿದ್ದಳು. ಈಕೆ ಬಂಧನದ ಬಳಿಕ ಮತ್ತಷ್ಟು ವಂಚನೆ ಪ್ರಕರಣ ಬಯಲಾಗಿದೆ.
ಕೋಮಲಾ ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ರಾಘವೇಂದ್ರ ಎಂಬಾತನಿಗೆ ಪರಿಚಯವಾಗಿದ್ದು, ವಿವಾಹವಾಗುವುದಾಗಿ ಹೇಳಿ 7.40 ಲಕ್ಷ ಹಣ ಪಡೆದು ವಂಚಿಸಿದ್ದಳು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಚಿಕ್ಕಬಳ್ಳಾಪುರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಹಿಳೆ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಆಕೆ ವಿರುದ್ಧ ಇಂತದ್ದೇ ಮೂರು ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಕೋಮಲಾ ರಾಘವೇಂದ್ರಗೆ ಮಾತ್ರವಲ್ಲ, ಕುಂದಾಪುರ ಮೂಲದ ಗುಜರಾತ್ ನಿವಾಸಿಯೊಬ್ಬರಿಗೂ ವಂಚಿಸಿದ್ದಾಳೆ. ಬೆಂಗಳೂರಿನ ನಾಗರಾಜ್ ಎಂಬುವವರಿಂದ 1.50 ಲಕ್ಷ ಹಣ ಪಡೆದು ವಂಚಿಸಿದ್ದಾಳೆ ಎಂದು ತಿಳಿದುಬಂದಿದೆ.
Fraud case,Woman,arrested
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ