Kannada NewsLatest

ಸಮಾಜಪರ ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ಬರಲಿ -ಮರುಳಸಿದ್ದ ಸ್ವಾಮಿಗಳು

 

ಪ್ರಗತಿವಾಹಿನಿ ಸುದ್ದಿ, ಅಥಣಿ:

ಅಥಣಿಯ ಯುವಜನತೆಗೆ ನಗರದ ಸಹಾಯ ಫೌಂಡೇಶನ್ ಉಚಿತವಾಗಿ ಎರಡು ತಿಂಗಳುಗಳ ಕಾಲ ಐಬಿಪಿಎಸ್(ಬ್ಯಾಂಕಿಂಗ್) ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಪರ ಸಂಘ ಸಂಸ್ಥೆಗಳು ಇನ್ನೂ ನೂರ್ಕಾಲ ಅಥಣಿ ಜನತೆಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಾ ಯುವಜನತೆಗೆ ಉತ್ತಮ ಮಾರ್ಗದರ್ಶಕವಾಗಿ ಬೆಳೆಯಲಿ ಎಂದು ಹೇಳಿದರು.
ಅವರು ಸ್ಥಳೀಯ ಸಹಾಯ ಫೌಂಡೇಶನ್ ವತಿಯಿಂದ ಉಚಿತ ಬ್ಯಾಂಕಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯ ಯುವಕರ ಕನಸಿನ ಕೂಸಾದ ಈ ಉಚಿತ ತರಬೇತಿ ಶಿಬಿರ ಹೀಗೆಯೆ ಸಮಾಜ ಪರ ಕಾರ್ಯಮಾಡುತ್ತಾ ಯಶಸ್ವಿಯಾಗಲಿ ಎಂದು ಹರಸಿದರು.
ಮುಖ್ಯ ಅತಿಥಿ ಎಚ್ ಜಿ ಗಡಕರಿ ಅವರು, ತಂದೆ ತಾಯಿಗಳಿಗೆ ಒಬ್ಬ ಮಗನಿಗೆ ಬೇಕಾದ ಶಿಕ್ಷಣವನ್ನು ಕೊಡಿಸಲಾಗುವುದಿಲ್ಲ. ಅಂತಹುದರಲ್ಲಿ ಇಲ್ಲಿ 50 ಜನ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ನೌಕರಿ ಪಡೆದು ಯಶಸ್ವಿಯಾಗಿ ಎಂದರು.
ಮತ್ತೋರ್ವ ಮುಖ್ಯ ಅತಿಥಿ  ಪ್ರಶಾಂತ ತೋಡಕರ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಂತೆ ಕಲಿಯಿರಿ ನಂತರ ಕಲಿಸಿರಿ ಎಂಬ ತತ್ವವನ್ನು ಈ ಸಹಾಯ ಫೌಂಡೇಶನ್ ಮುನ್ನಡೆಸಿಕೊಂಡು ಹೋಗುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ತತ್ವವನ್ನು ಇಲ್ಲಿ ಕಲಿಯುವಂತಹ ವಿದ್ಯಾರ್ಥಿಗಳು ಸೇರಿ ಮುನ್ನಡಸಿರಿ ಎಂದರು.
ರವಿ ಬಡಕಂಬಿ ಹಾಗೂ ಸಂತೋಷ ಬಡಕಂಬಿ, ನಾಗರಾಜ ಬೆಳ್ಳಂಕಿ ಮಾತನಾಡಿದರು. ರವಿ ಭಾಸಿಂಗಿ, ಪರಶುರಾಮ ನಂದೇಶ್ವರ, ಶಶೀದರ ಬರ್ಲಿ, ಸಚಿನ ಅವಟಿ, ಅನುಪಮಾ ಗೆಜ್ಜಿ, ಶ್ರದ್ದಾ ಐಗಳಿ, ಅಶ್ವಿನಿ ಪೂಜಾರಿ, ಸುಜಾತಾ ಹಿರೇಮಠ, ಶ್ರದ್ದಾ ಕುಂಬಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button