Karnataka NewsUncategorized

ಉಚಿತ ಸಿಇಟಿ, ನೀಟ್ ಮತ್ತು ಜೆಇಇ ಆನ್ಲೈನ್ ಪರೀಕ್ಷೆ: ಜಿ ಎಂ ಗಣಾಚಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಮಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರ ಆಶೀರ್ವಾದದೊಂದಿಗೆ 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ (SCH) ಪ್ರತಿಷ್ಠಾನ, ಗೋವನಕೊಪ್ಪ ಹಾಗೂ ಅಭಿನವ ಅಕಾಡೆಮಿ ಉಡುಪಿ ಸಹಯೋಗದೊಂದಿಗೆ ಉಚಿತ ಸಿಇಟಿ, ನೀಟ್ ಮತ್ತು ಜೆಇಇ ಆನ್ಲೈನ್ ಪರೀಕ್ಷೆ ನಡೆಸಲಾಗುವುದು.

ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿಯೇ ಕುಳಿತು ಈ ಉಚಿತ ಆನ್ಲೈನ್ ಪರೀಕ್ಷೆಗೆ ಹಾಜರಾಗಿ ಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಉತ್ತಮ ತಯ್ಯಾರಿ ಮಾಡಿಕೊಳ್ಳಬಹುದಾಗಿದೆ ಮತ್ತು ಈ ಉಚಿತ ತರಬೇತಿಯಲ್ಲಿ ಪ್ರತಿ ವಿಷಯಗಳಿಗೆ (PCMB) 160 ಪ್ರಾಕ್ಟೀಸ್ ಟೆಸ್ಟ್ ಮತ್ತು 100 ಲೈವ್ ಟೆಸ್ಟ್ ಗಳನ್ನೊಳಗೊಂಡು ಒಟ್ಟು ಸುಮಾರು ಹತ್ತು ಸಾವಿರ ಪ್ರಶ್ನೆಗಳು ಇರುತ್ತವೆ ಎಂದು ಶ್ರೀ ಜಿ ಎಂ ಗಣಾಚಾರಿ ಪ್ರಾಚಾರ್ಯರು ಆರ್.ಜಿ.ಎಸ್ ಸರಕಾರಿ ಪದವಿ ಪೂರ್ವ ಕಾಲೇಜು ಚನ್ನಮ್ಮನ ಕಿತ್ತೂರು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು Wise App ಅನ್ನು google PlayStore ಮುಖಾಂತರ ತಮ್ಮ ತಮ್ಮ ಮೊಬೈಲ್ ಗಳಲ್ಲಿ Install ಮಾಡಿಕೊಂಡು ನಮ್ಮ ಕ್ಲಾಸ್ ರೂಮ್ ಐಡಿ 449947782 ಗೆ ಈಗಲೇ ನೊಂದಾಯಿಸಿಕೊಳ್ಳಿ. ಈ ಉಚಿತ ತರಬೇತಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರ ಅಮೃತ ಹಸ್ತದಿಂದ ದಿನಾಂಕ 20/11/2022 ರಂದು ಚಿಂಚಲಿಯಲ್ಲಿ ಉದ್ಘಾಟನೆಕೊಳ್ಳಲಿದೆ.

ವಿದ್ಯಾರ್ಥಿಗಳು Wise App (Online Teaching App) ಅನ್ನು ಈ ಲಿಂಕ್ https://web.wise.live/download ಮೂಲಕ Install ಮಾಡಿಕೊಳ್ಳಬಹುದು ಅಥವಾ ಕೆಳಗಿನ QR Code ಮೂಲಕನೂ Install ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು Register ಮಾಡಿಕೊಂಡ ನಂತರ ಯಾವುದೇ ಫೀಸ್ ಅಥವಾ ತರಬೇತಿ ಶುಲ್ಕ ಪಾವತಿಸಬೇಕಾಗಿಲ್ಲ. ಕೇವಲ Register ಮಾಡಿಕೊಂಡರೆ ಸಾಕು ನಂತರ ನಾವು ಶುಲ್ಕ ರಹಿತವಾಗಿ ನಿಮ್ಮನ್ನು ನಮ್ಮ ಕ್ಲಾಸ್ ರೂಮ್ ಗೆ ಸೇರಿಸಿಕೊಳ್ಳುತ್ತೇವೆ ಎಂದು ಶ್ರೀ ಉದಯ ಕುಮಾರ ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮಹಾಂತೇಶ ಹೊಂಗಲ, ಸಂಸ್ಥಾಪಕರು SCH ಪ್ರತಿಷ್ಠಾನ ಗೋವನಕೊಪ್ಪ ಅವರನ್ನು ಸಂಪರ್ಕಿಸಿ – 9980677115

ವಿರೋಧದ ನಡುವೆಯೂ ಶಾಲೆಗಳಲ್ಲಿ ಧ್ಯಾನ ಜಾರಿಗೆ ಸಿದ್ಧತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button