ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಕಾಹೇರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸಮತೋಲನ (ಬ್ಯಾಲನ್ಸ್) ಜಾಗೃತಿ ಸಪ್ತಾಹದಂಗವಾಗಿ ಕಿವುಡುತನ ಉಚಿತ ತಪಾಸಣಾ ಶಿಬಿರವನ್ನು ಸೆ.19ರಿಂದ 24 ರವರೆಗೆ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.
ತಲೆ ಸುತ್ತು, ಸಮತೋಲನ ಇಲ್ಲದಿರುವದು, ಕಿವಿ ಕೇಳಿಸದಿರುವದು ಸೇರಿದಂತೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಶಿಬಿರದಲ್ಲಿ ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಾಗುವದು.
ಆಯುಷ್ಯಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಮಕ್ಕಳಲ್ಲಿರುವ ಕಿವುಡುತನವನ್ನು ಹೋಗಲಾಡಿಸುವದಕ್ಕಾಗಿ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆನ್ನು ಆಸ್ಪತ್ರೆಯಲ್ಲಿ ನೆರವೇರಿಸಲಾಗುತ್ತದೆ. ಶಿಬಿರದಲ್ಲಿ 8 ತಿಂಗಳಿಂದ 6 ವರ್ಷದೊಳಗಿನ ಮಕ್ಕಳಿಗೆ ಕಿವುಡುತನ ತಪಾಸಣೆಪತ್ತೆ ನಡೆಸಲಾಗುವುದು. ಸಂಪೂರ್ಣ ಕಿವುಡತನದಿಂದ ಬಳಲುತ್ತ ಶ್ರವಣ ಸಾಧನವನ್ನು ಬಳಸುವ ಮತ್ತು ಮೂಕ (ಮಾತನಾಡಲು ಬರದಿರುವ) ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪ್ರಯೋಜನವಾಗಲಿದೆ.
ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ: ಅಡವಾನ್ಸ ವೆಸ್ಟಿಬುಲರ ಡಿಸಾರ್ಡರ ಮತ್ತು ಕಿವುಡತ-ಕಾಕ್ಲಿಯರ ಇಂಪ್ಲಾಂಟ್ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಸೆ. 20 ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಬೆಂಗಳೂರಿನ ಸೈಕ್ಲೋಪ್ಸಮೆಡಟೆಕ್ ಪ್ರಾ. ಲಿ.ನ ನಿರ್ದೇಶಕರಾದ ಡಾ. ಶ್ರೀನಿವಾಸ್ ಡಿ.ಆರ್., ಮಾನಸ ಕಾಕ್ಲಿಯರ ಇಂಪ್ಲಾಂಟ್ ನಿರ್ದೇಶಕರಾದ ಡಾ. ವಸಂತಿ ಆನಂದ್ , ಡಾ. ಬೆಂಗಳೂರಿನ ರಾಜೀವ್ ಸಂಜಿ ಮತ್ತು ಬಾಗಲಕೋಟೆಯ ಡಾ. ಶಶಿಧರ ಸೂಳಿಗಾವಿ ಅವರು ಉಪನ್ಯಾಸ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಜನಸಂಪರ್ಕ ವಿಭಾಗ ಅಥವಾ 0831-2551116, 1358 ಸಂಪರ್ಕಿಸಲು ಕೋರಲಾಗಿದೆ.
ಮುರುಘಾಶ್ರೀ ಪ್ರಕರಣ; ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
https://pragati.taskdun.com/latest/murughashreebail-pleahearing-postpone/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ