ಉಚಿತ ಗ್ಯಾಸ್ ಶೇಗಡಿ ಹಾಗೂ ಸಿಲಿಂಡರ್ ವಿತರಣೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ತಾರಿಹಾಳ ಗ್ರಾಮದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಶೇಗಡಿ ಹಾಗೂ ಸಿಲಿಂಡರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು 135 ಫಲಾನುಭವಿಗಳಿಗೆ ಗ್ಯಾಸ್ ಶೇಗಡಿ ಹಾಗೂ ಸಿಲಿಂಡರ ವಿತರಿಸಿ ಮಾತನಾಡುತ್ತಾ ಬಿಪಿಎಲ್ ಕಾರ್ಡ ಹೊಂದಿದ ಗ್ಯಾಸ್ ಸಂಪರ್ಕ ವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ 6.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ.
ಅಲ್ಲದೆ ಇನ್ನೂ ಈ ಯೋಜನೆಯ ಲಾಭ ಪಡೆಯದವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ, ಅದರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಈ ಯೋಜನೆ ಅತ್ಯಂತ ಅನುಕೂಲಕರವಾಗಿದೆ, ಅಲ್ಲದೆ ಪ್ರಧಾನಿಯವರು ಇಂತಹ ಅನೇಕ ಯೋಜನೆಗಳನ್ನು ಜಾರಿ ಗೊಳಿಸಿದ್ದು ಅವುಗಳ ಬಗ್ಗೆ ಮಾಹಿತಿ ಪಡೆದು ಯಾವುದೇ ರಾಜಕೀಯ ಮಾಡದೇ ಎಲ್ಲರೂ ಅವುಗಳ ಸದುಪಯೋಗ ಪಡೆದು ಕೊಳ್ಳಬೇಕೆಂದು ಕರೇನೀಡಿದರು.
ಮೋಹನ ಅಂಗಡಿ, ಪುಂಡಲಿಕ ನಾಯಿಕ, ತಾಲೂಕ ಪಂಚಾಯತಿ ಸದಸ್ಯರಾದ ಲಕ್ಷ್ಮಿ ಮಾಸ್ತಮರ್ಡಿ, ಜಿಲ್ಲಾ ಪಂಚಾಯತ ಸದಸ್ಯರಾದ ನಾಗರಾಜ ಪಾಟೀಲ, ಗಜಾನನ ನಾಯಕ, ರಾಜು ರಾಗಿಪಾಟೀಲ, ಲಕ್ಷ್ಮಿ ಗೊಂಡವಾಡಕರ, ಸಿದ್ದಯ್ಯಾ ಪೂಜಾರ, ಫಕೀರಾ ಕಲ್ಲಣ್ಣವರ, ಪಡೆನ್ನವರ, ಸೋಮನಾಥ ಖನಗಾಂವಕರ, ಸಂಬಾ ಖನಗಾಂವಕರ ಹಾಗೂ ಫಲಾನುಭವಿಗಳು, ಗ್ರಾಮಸ್ತರು ಪಾಲ್ಗೊಂಡಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ