ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನೈಸರ್ಗಿಕ ವಿಪತ್ತುಗಳಿಗೆ ಹೆದರದೇ ಪೂರ್ವಸಿದ್ದತೆಯಿಂದ ಇದ್ದರೆ ಆರೋಗ್ಯಯುತವಾಗಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು.
ಅವರು ಇಂದು ನಗರದ ವಡಗಾವಿಯ ಚಾವಡಿಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಭಾಭವನದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಬೆಳಗಾವಿ ಜಿಲ್ಲಾ ರಿಟ್ಯೇಲ ಪಾರ್ಮಸಿ ಅಸೋಶಿಯೇಷನ್ ಹಾಘೂ ಶ್ರೀ ಮಲ್ಲಿಕಾಜುನ ದೇವಸ್ಥಾನ ಟ್ರಸ್ಟ ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾgವಾಗಿ ಮಳೆ ಸುರಿಯುತ್ತಿದ್ದು ಕೋಟ್ಯಾನುಗಟ್ಟಲೇ ಮೊತ್ತದ ಆಸ್ತಿಪಾಸ್ತಿಗಳು ಹಾಳಾಗಿವೆ. ಧನಕನಕಗಳು ಹೋದರೆ ಮತ್ತೆ ಸಂಪಾದಿಸಬಹುದು ಈ ಸಮಯದಲ್ಲಿ ಆರೋಗ್ಯ ಕಾಳಜಿಯು ಅಗತ್ಯವಾಗಿದೆ ಆದ್ದರಿಂದ ಕುದಿಸಿ ಆರಿಸಿ ಶುದ್ದೀಕರಿಸಿದ ನೀರನ್ನೇ ಕುಡಿಯಿರಿ. ಕೈಕಾಲುಗಳನ್ನು ಸ್ವಚ್ಚವಾಗಿ ತೊಳೆದು ಊಟ ತಿಂಡಿಗಳುನ್ನು ಸೇವಿಸಿರಿ ಹಾಗೂ ಸುರಕ್ಷಿತವಾಗಿರಿ ಎಂದು ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ¸ಧ್ಯ ನಗರದಲ್ಲಿ ಎಲ್ಲೆಂದರಲ್ಲಿ ನೀರು ಅಪಾರ ಪ್ರಮಾಣದಲ್ಲಿದ್ದು ಮನೆಯ ಸುತ್ತಮುತ್ತ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಿರಿ ಇದರಿಂದ ಡೆಂಗ್ಯ ಮಲೇರಿಯಾದಂತಹ ಮಾರಕ ರೋಗಗಳಿಂದ ದೂರವಿರಬಹುದಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಬೆಳಗಾವಿ ಜಿಲ್ಲಾ ರಿಟ್ಯೇಲ ಪಾರ್ಮಸಿ ಅಸೋಶಿಯೇಷನ್ ನ ಸದಸ್ಯ ಶ್ರೀ ವಿನೋದ ಕೊವ್ವಾಡ ಇಂತಹ ಸಂದರ್ಭಗಳಲ್ಲಿ ನಮ್ಮ ಅಸೋಶಿಯೇಷನ್‍ನಿಂದ ಸಾರ್ವಜನಿಕರಿಗೆ ಅಗತ್ಯ ಸಹಕಾರವನ್ನು ನೀಡಲು ನಾವೆಂದು ಸಿದ್ದ ಎಂದು ತಿಳಿಸಿದರು.
ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಕೃಷ್ಣಾ ಡಾ. ವಿ ಎಸ ಅಂಗಡಿ ಮತ್ತು ಮಕ್ಕಳ ತಜ್ಞ ಡಾ. ಪವನಕುಮಾರ ಪೂಜಾರ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಸಂತೋಷ ಇತಾಪೆ , ಶ್ರೀ ವಿಜಯಕುಮಾರ ಮುನವಳ್ಳಿ , ಶ್ರೀ ಗಜಾನನ ಗುಂಜೇರಿ ಮತ್ತು ಅವರ ಸಹಚರರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ ನ ಮುಖಂಡ. ಶ್ರೀ ಈರಪ್ಪ ತಿಗಡಿ ಮತ್ತಿತರೆ ಪಧಾದಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ರಿಟ್ಯೇಲ್ ಪಾರ್ಮಸಿ ಅಸೋಶಿಯೇಷನ್ ನ ಸದಸ್ಯರುಗಳಾದ ಶ್ರೀ ವಿನೋದ ಕೊವ್ವಾಡ, ಶ್ರೀ ನಂದಕಿಶೋರ ನಾಗೋರಿ, ಶ್ರಿ ಸಿದ್ದನ್ನಾ ಮುನ್ನೊಳಿ ಶ್ರೀ ಶೈಲೇಂದ್ರ ಜೈನ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 350ಕ್ಕೂ ಅಧೀಕ ನಾಗರಿಕರನ್ನು ತಪಾಸಣೆ ಮಾಡಿ ಉಚಿತ ಔಷಧಿಗಳನ್ನು ವಿತರಿಸಲಾಯಿತು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ