
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಚಿತ ಹೃದಯರೋಗ ತಪಾಸಣಾ ಶಿಬಿರ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಭಾರತೀಯ ವೈದ್ಯಕೀಯ ಸಂಘದ ಚಿಕ್ಕೋಡಿ ಘಟಕ ಇವುಗಳ ಆಶ್ರಯದಲ್ಲಿ ಚಿಕ್ಕೋಡಿಯ ಬಸವೇಶ್ವರ ವೃತ್ತದಲ್ಲಿರುವ ಕೆಎಲ್ ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಶನಿವಾರ ದಿ. 1 ಮಾರ್ಚ 2025 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಎದೆ ನೋವು, ಎದೆಯ ಬಿಗಿತ, ಉಸಿರಾಟದ ತೊಂದರೆ, ಕುತ್ತಿಗೆ, ದವಡೆ, ಗಂಟಲು, ಹೊಟ್ಟೆ ಅಥವಾ ಬೆನ್ನಿನಲ್ಲಿ ನೋವು. ಅನಿಯಮಿತ ಹೃದಯ ಬಡಿತ, ನಡೆಯುವಾಗ ಎದೆ ನೋವು, ತೀವ್ರ ಒತ್ತಡ, ಕಾಲುಗಳಲ್ಲಿ/ ಪಾದಗಳಲ್ಲಿ ಭಾವು, ದೌರ್ಬಲ್ಯ, ತಲೆತಿರುಗುವಿಕೆ. ಆಯಾಸ, ತಂಪಾದ ಕಾಲುಗಳು, ಇತ್ಯಾದಿ ಹೃದಯದ ರೋಗಲಕ್ಷಣಗಳನ್ನು ಹೊಂದಿರುವವರು ಶಿಬಿರದಲ್ಲಿ ಪಾಲಗೊಂಡು ಹೃದಯದ ಆರೋಗ್ಯ ತಪಾಸಿಸಿಕೊಳ್ಳುವಂತೆ ಕೋರಲಾಗಿದೆ.
ಮುಂಚಿತವಾಗಿ ಶಿಬಿರಕ್ಕೆ ರೋಗಿಗಳು ತಮ್ಮ ಹೆಸರನ್ನು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9986992467/9844366188/9535474870/08338274771 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.