ಪ್ರಗತಿವಾಹಿನಿ ಸುದ್ದಿ, ಮುಧೋಳ – ಜಗತ್ತನ್ನು ಬೆಚ್ಚಿಬಿಳಿಸಿದ ಕೊರೋನಾ ಮಹಾಮಾರಿಗೆ ಜಗತ್ತು ತತ್ತರಿಸಿದೆ. ಇಡೀ ಭಾರತವೇ ಸ್ತಬ್ದವಾಗಿದೆ. ಈ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸೋಂಕಿನಿಂದ ನಮ್ಮನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ‍್ಸ್‌ಗೆ ಇಡೀ ಸಮಾಜವೇ ಋಣಿಯಾಗಿದ್ದೇವೆ ಎಂದು ಎಂ.ಆರ್.ಎನ್. (ನಿರಾಣಿ ) ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದ್ದಾರೆ.
ಮುಧೋಳ ನಗರದಲ್ಲಿ ಕೊರೋನಾ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ನಿರತರಾಗಿರುವ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸರು, ಪೌರಕಾರ್ಮಿಕರಿಗಾಗಿ ಎಂ.ಆರ್.ಎನ್. (ನಿರಾಣಿ ) ಫೌಂಡೇಶನ್ ವತಿಯಿಂದ ಉಚಿತ ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.
ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಮ್ಮನ್ನೆಲ್ಲ ಮನೆಯಲ್ಲಿರಲು ಹೇಳಿ ತಾವು ರಸ್ತೆಯುದ್ದಕ್ಕೂ ಹಗಲಿರುಳು ಈ ಯುದ್ದದಲ್ಲಿ ನಿರತರಾಗಿರುವವರ ಸುರಕ್ಷತೆಯ ದೃಷ್ಟಿಯಿಂದ ಸ್ಯಾನಿಟೈಸರ್‌ನ್ನು ನಮ್ಮ ಸಮೂಹ ಸಂಸ್ಥೆಯ ವತಿಯಿಂದ ೧ ಕೋಟಿ ರೂ. ಮೌಲ್ಯದ ಸ್ಯಾನಿಟೈಸರ್‌ಗಳನ್ನು ತಯಾರಿಸಿ ವಿತರಿಸಲು ಶಾಸಕ ಮುರುಗೇಶ ನಿರಾಣಿ ಯವರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಕೆಲಸದಲ್ಲಿ ಎಲ್ಲರೂ ಸ್ವಯಂಪ್ರೇರಣೆಯಿಂದ ತೊಡಗಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ, ಪುರಸಭೆ, ಪೋಲಿಸ್ ಠಾಣೆ ವಿವಿಧ ಕಡೆಗಳಲ್ಲಿ ಸ್ಯಾನಿಟೈಸರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಬಸವರಾಜ ಪಾಟೀಲ, ವೆಂಕಟೇಶ ಮಲಘಾಣ ಸುನೀಲ ಪೂಜೇರಿ, ಶಶಾಂಕ ಬಿಡೆ, ಡಾ. ನಾವಲಗಿ, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದರ, ವೆಂಕಣ್ಣ ಗಿಡ್ಡಪ್ಪನವರ, ಉದಯ ಸಾರವಾಡ, ಶಿವನಗೌಡ ಪಾಟೀಲ, ಮಹಾದೇವಪ್ಪ ಹೊಸಕೋಟಿ, ಅಜೀತ ಹೊನವಾಡ, ರಾಚಪ್ಪ ಕರೆಹೊನ್ನ, ಬಾಬು ಮುಗತಿ, ಕಲ್ಮೇಶ ಗೋಸಾರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ