Beereshwara 27
Emergency Service

ಮೇ 15ರಂದು ಮಧುಮೇಹ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ವಿಶ್ವ ತಾಯಿಂದಿರ ದಿನಾಚರಣೆ ಅಂಗವಾಗಿ ಇದೇ ದಿ. ೧೫ ಮೇ ೨೦೨೩ರಂದು ಬೆಳಗ್ಗೆ ೮.೩೦ರಿಂದ ಸಂಜೆ ೪.೩೦ರವರೆಗೆ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ೨೩ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.

ಡಾ.ಎಂ.ವಿ.ಜಾಲಿ


ಔರಂಗಬಾದನ ಸಾರ್ದಾ ಡಯಾಬಿಟಿಸ್ ಕೇಂದ್ರ ಹಾಗೂ ಸೆಲ್ಫ ಕೇರನ ಡಾ. ಅರ್ಚನಾ ಸಾರ‍್ದಾ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಅಂತರಾಷ್ಟ್ರೀಯ ಡಯಾಬಿಟಿಸ್ ಫೆಡರೇಶನ್ ಅವರ ಮಾರ್ಗಸೂಚಿಗನುಗುಣವಾಗಿ ಉಚಿತ ರಕ್ತ, ಮಸ್ಕಲರ ಸ್ಕೆಲ್‌ಟಲ್ ತಪಾಸಣೆ, ಆಟ, ಚಿತ್ರಕಲೆ, ಪೇಂಟಿಂಗ್ ಸ್ಫಧೆ ಹಾಗೂ ಅನೇಕ ಪ್ರೇರಣಾದಾಯಕವಾದ ಕಾರ‍್ಯಚಟುವಟಿಕೆಗಳಿಂದ ಸ್ವತಃ ಮಧುಮೇಹ ಮಕ್ಕಳ ಕಾಳಜಿ ತೆಗೆದುಕೊಳ್ಳುವ ಕುರಿತು ಮಾಹಿತಿ ಕೊಡಲಾಗುತ್ತಿದೆ. ಶಿಬಿರದಲ್ಲ್ಲಿ ಅತ್ಯುತ್ತಮ ಎನಿಸಿಕೊಂಡ ಬಾಲಕಿ ಮತ್ತು ಬಾಲಕನಿಗೆ ಹಾಗೂ ಓರ್ವ ತಾಯಿಗೆ ಪದಕ ನೀಡಿ ಗೌರವಿಸಲಾಗುತ್ತದೆ.
ಮಧುಮೇಹ ಕೇಂದ್ರವು ಕಳೆದ ೨೨ ವರ್ಷಗಳಿಂದ ಉಚಿತ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮಕ್ಕಳಿಗೆ ಮಧುಮೇಹದ ಕುರಿತು ಶಿಕ್ಷಣ, ಆರೋಗ್ಯಯುತ ಜೀವನ ನಡೆಸಲು ಅವರಲ್ಲಿ ಧೈರ‍್ಯವನ್ನು ತುಂಬುವ ಕಾರ‍್ಯ ಮಾಡಲಾಗುತ್ತದೆ.
ಮಧುಮೇಹ ಟೈಪ್ -೧ ರಿಂದ ಬಳಲುತ್ತಿರುವ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಇನ್ಸುಲಿನ್, ಗ್ಲುಕೊಮೀಟರ, ವಿವಿಧ ವೈದ್ಯಕೀಯ ಸಲಕರಣೆ, ಶೈಕ್ಷಣಿಕ ಸ್ಕಾಲರಶಿಪ್ ಸೇರಿದಂತೆ ಮಧುಮೇಹಕ್ಕೆ ಸಂಬಂಧಿಸಿದ ಇನ್ನಿತರ ಸಾಧನಗಳನ್ನು ನೀಡಲಾಗುತ್ತದೆ. ಹಿರಿಯ ಮಧುಮೇಹ ತಜ್ಞವೈದ್ಯರಾದ ಡಾ. ಎಂ ವಿ ಜಾಲಿ ಅವರ ಮುಂದಾಳತ್ವದಲ್ಲಿ ನಡೆಯುವ ಶಿಬಿರವನ್ನು ಡಾ. ಸುಜಾತಾ ಜಾಲಿ ಅವರು ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೮೭೬೨೦೧೫೯೯೯, ೮೦೯೫೯೫೮೧೩೨ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.


Bottom Ad 1
Bottom Ad 2

You cannot copy content of this page