ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ.ಎಲ್.ಇ.ಎಸ್ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮಧುಮೇಹ ಕೇಂದ್ರವು ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಮೇ 14, 2022 ರಂದು ಶನಿವಾರ ಬೆಳಿಗ್ಗೆ 8.30 ರಿಂದ ಸಂಜೆ 4.30 ರವರೆಗೆ “ಅಂತರರಾಷ್ಟ್ರೀಯ ತಾಯಂದಿರ ದಿನದ” ಸ್ಮರಣಾರ್ಥ ಮಧುಮೇಹ ಕೇಂದ್ರದಲ್ಲಿ ಆಯೋಜಿಸುತ್ತಿದೆ.
ಕೆಎಲ್ ಇಎಸ್ ಮಧುಮೇಹ ಕೇಂದ್ರದಲ್ಲಿ ಕಳೆದ 21 ವರ್ಷಗಳಿಂದ ವಾರ್ಷಿಕವಾಗಿ ಶಿಬಿರ ನಡೆಸಲಾಗುತ್ತಿದೆ. ಈ ಶಿಬಿರವು ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಮಧುಮೇಹದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಮಧುಮೇಹ ಹೊಂದಿರುವ ಮಕ್ಕಳಿಗೆ ಆರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಉಚಿತ ಬ್ಲಡ್ ಶುಗರ್ (Blood sugar), HbA1C, ಥೈರಾಯ್ಡ್ ಪರೀಕ್ಷೆಗಳು, ಮಧುಮೇಹ ಶಿಕ್ಷಣ, ಟಿ-ಶರ್ಟ್ ವಿತರಣೆ ಮತ್ತು T1DM ಹೊಂದಿರುವ ಮಕ್ಕಳಿಗೆ ಆಶ್ಚರ್ಯಕರ ಉಡುಗೊರೆಗಳನ್ನು ನೀಡಲಾಗುತ್ತದೆ. ತಾಯಂದಿರಿಗೆ ಅಡುಗೆ ಪ್ರಾತ್ಯಕ್ಷಿಕೆ ತರಗತಿಗಳು ಮತ್ತು ಆಹಾರ ಪ್ರದರ್ಶನಗಳು, ಇದಲ್ಲದೆ, ಮಕ್ಕಳಿಗೆ ಕ್ರೀಡೆ ಮತ್ತು ಚಿತ್ರಕಲೆ ಸ್ಪರ್ಧೆಗಳು ಇರುತ್ತವೆ.
ಮಧುಮೇಹ ಕೇಂದ್ರವು “ರಾಷ್ಟ್ರೀಯ ಮಧುಮೇಹ ಫೌಂಡೇಶನ್” (NDF) ಮತ್ತು “ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್” (IDF) ನಿಂದ ಬೆಂಬಲಿತವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಯವರು ಅತಿಥಿಗಳಾಗಿ ಆಗಮಿಸುವರು.
ಆಯ್ದ ಮಕ್ಕಳಿಗೆ ಮಧುಮೇಹ ಕೇಂದ್ರದ ಪದಕವನ್ನು ಮತ್ತು ಪ್ರತಿಭಾವಂತ ಮಧುಮೇಹ ಮಗುವಿನ ಅತ್ಯುತ್ತಮ ತಾಯಂದಿರಲ್ಲಿ ಒಬ್ಬರಿಗೆ ಪದಕವನ್ನು ನೀಡಲಾಗುತ್ತದೆ. ಟೈಪ್ 1 ಮಧುಮೇಹ ಹೊಂದಿರುವ ಎಲ್ಲಾ ಮಕ್ಕಳು ಶಿಬಿರಕ್ಕೆ ಹಾಜರಾಗಲು ನೋಂದಾಯಿಸಿಕೊಳ್ಳಬೇಕು. ಕೇಂದ್ರವು IDF (Life for a Child) ನಿಂದ ಗುರುತಿಸಲ್ಪಟ್ಟಿದೆ, ಇದರ ಅಡಿಯಲ್ಲಿ ಟೈಪ್ 1 ಮಧುಮೇಹ ಹೊಂದಿರುವ ಎಲ್ಲಾ ಮಕ್ಕಳು ಉಚಿತ ರಕ್ತದಲ್ಲಿನ ಗ್ಲೂಕೋಸ್ ಮಾನಿಟರ್ ಮತ್ತು ಬ್ಯಾಂಡೇಜ್‌ಗಳನ್ನು ಪಡೆಯುತ್ತಾರೆ. ಉಚಿತ ಇನ್ಸುಲಿನ್ ಪೂರೈಕೆ (ಮಧುಮೇಹ ಹೊಂದಿರುವ ಮಕ್ಕಳು ಕೇಂದ್ರದಲ್ಲಿ ಉಚಿತ ಇನ್ಸುಲಿನ್ ಪಡೆಯುತ್ತಾರೆ) ಮತ್ತು ಮಧುಮೇಹ ಶಿಕ್ಷಣವನ್ನು ಕಲಿಸಲಾಗುತ್ತದೆ.
ಇತ್ತೀಚೆಗೆ “ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಪಿಡಿಯಾಟ್ರಿಕ್ ಅಂಡ್ ಅಡೋಲೆಸೆಂಟ್ ಡಯಾಬಿಟಿಸ್” (International Society for Paediatric and Adolescent Diabetes) (ISPAD) ಮತ್ತು ಯುರೋಪಿಯನ್ ಒಕ್ಕೂಟದ ಸ್ವೀಟ್ ಪ್ರಾಜೆಕ್ಟ್(SWEET) ಇವರು 2024 ರ ವರೆಗೆ ಈ ಮಧುಮೇಹ ಕೇಂದ್ರವನ್ನು” ಸೆಂಟರ್ ಆಫ್ ರೆಫೆರೆನ್ಸ ಫಾರ್ ಪಿಡಿಯಾಟ್ರಿಕ್ ಡಯಾಬಿಟೀಸ” (Center of Reference for Pediatric Diabetes) ಎಂದು ಗುರುತಿಸಿದ್ದಾರೆ. ಪ್ರೊ. ಡಾ.ವಿ.ಡಿ ಪಾಟೀಲ್, ಡಾ.ಎನ್.ಎಂ.ಮಹಾಂತಶೆಟ್ಟಿ, ಮತ್ತು ಗೌರವಾನ್ವಿತ ಉಪಕುಲಪತಿ ಡಾ ವಿವೇಕ್ ಸಾವೋಜಿ (KAHER) ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ನೇತೃತ್ವವನ್ನು ಡಾ.ಎಂ.ವಿ. ಜಾಲಿ, ಮುಖ್ಯ ಮಧುಮೇಹ ತಜ್ಞ ಮತ್ತು ಕೆ.ಎಲ್.ಇ.ಎಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಇವರು ವಹಿಸಲಿದ್ದಾರೆ, ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ.ಸುಜಾತಾ ಜಾಲಿ, ಮಕ್ಕಳ ಮಧುಮೇಹ ಘಟಕದ ಡಾ.ಜ್ಯೋತಿ ವಾಸೆದಾರ್ ಮತ್ತು ಮಧುಮೇಹ ನಿರ್ವಹಣಾ ತಂಡ ಕಾರ್ಯಕ್ರಮಗಳನ್ನು ಸಂಯೋಜಿಸುವರು. ಮಧುಮೇಹ ಕಣ್ಣಿನ ತಪಾಸಣೆಯಲ್ಲಿ ಪರಿಣತಿ ಹೊಂದಿರುವ ಡಾ.ದೀಪಶ್ರೀ ಆಂಟಿನ್ ಅವರು ಫಂಡಸ್ಕೋಪಿಕ್ ಮತ್ತು ರೆಟಿನಾ ಫೋಟೋಗ್ರಾಫಿಗಾಗಿ ಮಕ್ಕಳನ್ನು ಪರೀಕ್ಷಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.
ಫೋನ್ ನಂ. : 9844073591 / 9986823568
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ