Kannada NewsKarnataka NewsLatest

ಡೀಸೆಲ್ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ೨೩-೦೩-೨೦೨೧ ಬೆಳಿಗ್ಗೆ ೯ ಗಂಟೆಗೆ ಲೋಕಸಭಾ ಉಪ ಚುನಾವಣೆ ನಿಮಿತ್ಯ ಬಾತ್ಮಿ ಮೇರೆಗೆ ಬೆಳಗಾವಿ ತಾಲ್ಲೂಕಿನ ಕಿಣಯೇ ಕ್ರಾಸ್ ಬಳಿ ಡೀಸೆಲ್ ಟ್ಯಾಂಕರ್ ವಾಹನದಲ್ಲಿ  ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಲಿಂಗಸ್ವಾಮಿ ನರಸಿಂಹ ತಾ : ನರಸಿಂಗ್ ಬಬ್ಲಾ ಜಿ : ನಲಗೊಂಡ -೫೦೮೦೦೧ ರಾಜ್ಯ: ತೆಲಂಗಾಣ ಎಂಬಾತನನ್ನು ದಸ್ತಗೀರ ಮಾಡಿ ಟ್ಯಾಂಕರ್‌ನ ೨ ಕಂಪಾಟಮೆಂಟ್‌ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ ೧೨೧ ಪೆಟ್ಟಿಗೆಗಳನ್ನು ಜಪ್ತು ಮಾಡಲಾಯಿತು.

Home add -Advt

ಡಾ ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು, ಜಯರಾಮೇಗೌಡ ಅಬಕಾರಿ ಉಪ ಆಯುಕ್ತರು, ಆರ್ ಎಂ ಮುರಗೋಡ, ಮತ್ತು ತಳೇಕರ ಅಬಕಾರಿ ಉಪ ಅಧೀಕ್ಷಕರು, ಮಾರ್ಗದರ್ಶನದಲ್ಲಿ ಮಂಜುನಾಥ ಮೆಳ್ಳಿಗೇರಿ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳಾದ ಅಬಕಾರಿ ಉಪ ನಿರೀಕ್ಷಕರಾದ ಚಾಲುಕ್ಯ, ಅಸುದೆ, ಮತ್ತು ಸಿಬ್ಬಂಧಿಗಳಾದ ಆನಂದ ಪಾಟೀಲ್, ತಿಗಡಿ, ದೊಡಮನಿ, ಕರಗುಪ್ಪಿ, ದಾಳಿಯಲ್ಲಿ ಭಾಗವಹಿಸಿದ್ದರು.

ಜಪ್ತು ಮಾಡಲಾದ ವಸ್ತುಗಳು –

೧೨೧ ಗೋವಾ ಮದ್ಯದ ಪೆಟ್ಟಿಗೆಗಳು ವಿವಿಧ ನಮೂನೆಯ ಗೋವಾ ರಾಜ್ಯದ ಮದ್ಯ
ಅಶೋಕ ಲೆಲ್ಯಾಂಡ ಟ್ಯಾಂಕರ್ ಆರು ಚಕ್ರದ ವಾಹನ .
ಮದ್ಯದ ಮೌಲ್ಯ : ೩೪೩೦೦೦/- ವಾಹನದ ಮೌಲ್ಯ : ೬೦೦೦೦೦/-
ಒಟ್ಟು : ೯೪೩೦೦೦/-

Related Articles

Back to top button