ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತಕ್ಕೆ ಎದುರಾಗಿರುವ ವಿವಿಧ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ ಕುರಿತು ಚರ್ಚಿಸಲು ಪ್ರಬುದ್ಧ ಭಾರತ ಮತ್ತು FINS-ಬೆಳಗಾವಿ ಶುಕ್ರವಾರ ಸಂವಾದ ಕಾರ್ಯಕ್ರಮ ಆಯೋಜಿಸಿವೆ.
ಭಾರತವು ಭಯೋತ್ಪಾದನೆ, ದಂಗೆ, ಕೋಮು ಉದ್ವಿಗ್ನತೆ ಮತ್ತು ಸೈಬರ್ ಬೆದರಿಕೆಗಳಂತಹ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಕ್ರಿಮಿನಲ್ ಚಟುವಟಿಕೆಗಳು, ನೈಸರ್ಗಿಕ ವಿಕೋಪಗಳು ಮತ್ತು ಸಾಮಾಜಿಕ ಅಶಾಂತಿಯಿಂದಾಗಿ ಭದ್ರತಾ ವ್ಯವಸ್ಥೆಯೂ ಸಹ ಒತ್ತಡಕ್ಕೊಳಗಾಗುತ್ತಿದೆ, ಶಾಂತಿ ಕಾಪಾಡಿಕೊಳ್ಳಲು ಪರಿಣಾಮಕಾರಿ ಪರಿಹಾರಗಳ ಅಗತ್ಯವಿದೆ.
ಈ ಸವಾಲುಗಳ ಕುರಿತು ಚರ್ಚಿಸಲು ಪ್ರಬುದ್ಧ ಭಾರತ ಮತ್ತು FINS-ಬೆಳಗಾವಿ ತಂಡವು ತಜ್ಞರ ಜೊತೆ ಸಂವಾದವನ್ನು ಆಯೋಜಿಸಿದೆ. ಶುಕ್ರವಾರ ಸಂಜೆ 6 ಗಂಟೆಗೆ ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಶ್ಚಾಪುರೆ, ಕನ್ಹೇರಿ ಮಠದ ಅದೃಶ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ