ಪ್ರಗತಿವಾಹಿನಿ ಸುದ್ದಿ; ಮೈಸೂರು: ಖ್ಯಾತ ವಿಮರ್ಷಕ ಜಿ.ಹೆಚ್.ನಾಯಕ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಗೋವಿಂದರಾಯ ಹಮ್ಮಣ್ಣ ನಾಯಕ ಸಾಹಿತ್ಯ ಲೋಕದಲ್ಲಿ ಜಿ.ಹೆಚ್.ನಾಯಕ ಎಂದೇ ಚಿರಪರಿಚಿತರಾಗಿದ್ದರು. ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಇಂದು ಮಧ್ಯಾಹ್ನ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ 1935 ಸೆಪ್ಟೆಂಬರ್ 18ರಂದು ಜನಿಸಿದ್ದ ಜಿ.ಹೆಚ್.ನಾಯಕ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದರು.
ಸಮಕಾಲೀನ, ಅನಿವಾರ್ಯ, ನಿರಪೇಕ್ಷೆ, ನಿಜದನಿ, ಉತ್ತರಾಧ, ಸಾಹಿತ್ಯ ಸಮೀಕ್ಷೆ, ಹರಿಶ್ಚಂದ್ರ ಕಾವ್ಯ, ಓದು-ವಿಮರ್ಶೆ ಹತ್ತಾರು ಕೃತಿಗಳನ್ನು ರಚಿಸಿದ್ದರು. ಕನ್ನದ ಸಣ್ಣಕಥೆಗಳು, ಹೊಸಗನ್ನದ ಕವಿತೆಗಳು, ಸಂವೇದನೆ (ಅಡಿಗರ ಗೌರವ ಗ್ರಂಥ) ಶ್ರೀರಾಮಾಯಣ ದರ್ಶನಂ ಕುವೆಂಪು ಸ್ವ ಹಸ್ತಾಕ್ಷರ ಪ್ರತಿ ಹಾಗೂ ಶತಮಾನದ ಕನ್ನಡ ಸಾಹಿತ್ಯ ಕುರಿತ ಸಂಪಾದಕೀಯದ ಜತೆ ಬಾಳು ಎಂಬ ಆತ್ಮಕಥನವನ್ನು ರಚಿಸಿದ್ದರು.
ಉತ್ತರಾರ್ಧ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಷಾ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ, ನಿಜದನಿ ವಿಮರ್ಷಾ ಕೃತಿಗೆ ವಿ.ಎಂ.ಇನಾಮದಾರ ಸ್ಮಾರಕ ಬಹುಮಾನ ಮತ್ತು ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ