Kannada NewsLatestNational

*G20 ಶೃಂಗಸಭೆ ಆರಂಭ; ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ G20 ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದ್ದು, ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪ್ ದಲ್ಲಿ ಇಂದಿನಿಂದ ಎರಡು ದಿನಗಳ ಜಿ 20 ಶೃಂಗಸಭೆಗೆ ಚಾಲನೆ ದೊರೆತಿದೆ.

ಎರಡು ದಿನಗಳ ಜಿ 20 ಸಮ್ಮೇಳನದ ಮೊದಲ ಅಧಿವೇಶನವು ‘ಒನ್ ಅರ್ಥ್’ (ಒಂದು ಭೂಮಿ) ವಿಷಯವನ್ನು ಆಧರಿಸಿದೆ ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ (ವಸುದೈವ ಕುಟುಂಬಕಂ) ಎಂಬ ವಿಷಯವನ್ನು ಆಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಜಿ 20 ಶೃಂಗಸಭೆ ಹಿನ್ನೆಲೆಯಲ್ಲಿ ಭರತ್ ಮಂಟಪ್ ಗೆ ಆಗಮಿಸಿದ ಜಾಗತಿಕ ನಾಯಕರನ್ನು ಸ್ವಾಗತಿಸಿದ್ದಾರೆ. ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ್ ಮಂತಪಕ್ಕೆ ಆಗಮಿಸಿದ ಯು ಎಸ್ ಅಧ್ಯಕ್ಷ ಜೋ ಬೈಡನ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, WHO ಮಹಾನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಸೇರಿದಂತೆ ಎಲ್ಲಾ ಜಾಗತಿಕ ನಾಯಕರನ್ನು ಸ್ವಾಗತಿಸಿದರು.

ಬಳಿಕ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಇದೇ ವೇಳೆ ಪ್ರಧಾನಿ ಮೋದಿ, ಜಿ 20 ಒಕ್ಕೂಟಕ್ಕೆ ಆಫಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button