Latest

ಗದಗ: ಮೃಗಾಲಯದ ಪ್ರಾಣಿಪಾಲಕನ ಮೇಲೆ ಮೊಸಳೆ ದಾಳಿ 

ಪ್ರಗತಿವಾಹಿನಿ;  ಗದಗ  – 
ನಗರದ ಹೊರವಲಯದಲ್ಲಿರುವ ಬಿಂಕದಕಟ್ಟಿ ಮೃಗಾಲಯದ ಪ್ರಾಣಿಪಾಲಕ ಮೃತ್ಯುಂಜಯ ಹಿರೇಮಠ ಅವರಿಗೆ ಮೊಸಳೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಮೃತ್ಯುಂಜಯ ಅವರು ಶನಿವಾರ ಮೊಸಳೆ ಮನೆ ಸ್ವಚ್ಛಗೊಳಿಸಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೊಸಳೆ ಮನೆ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೃತ್ಯುಂಜಯ ಅವರ ಮೇಲೆ ದಾಳಿ ನಡೆಸಿದ ಮೊಸಳೆ ಅವರ ತಲೆಗೆ ಕಚ್ಚಿ ಗಾಯಗೊಳಿಸಿದೆ. . ಈ ವೇಳೆ ಅಲ್ಲಿಯೇ ಇದ್ದ ಇತರೆ ಸಿಬ್ಬಂದಿ ಮೊಸಳೆಗೆ ಕಟ್ಟಿಗೆಯಿಂದ ಬಡಿದು, ಮೃತ್ಯುಂಜಯ ಅವರನ್ನು ಬಿಡಿಸಿದ್ದಾರೆ.
ಗಾಯಾಳುವಿಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button