Kannada NewsKarnataka NewsLatest
*ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ, ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ನೀಚ ಕೃತ್ಯ*

ಪ್ರಗತಿವಾಹಿನಿ ಸುದ್ದಿ; ಗದಗ: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ ನಡೆದು, ಬಾಲಕಿ ಗರ್ಭಿಣಿಯಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಆಧಾರ್ ಕಾರ್ಡ್ ಮಾಡಿಸಲು ಮನೆಗೆ ಹೋಗಿದ್ದಳು. ಮನೆಯಿಂದ ಬರುವಾಗ ಪರಿಚಯಸ್ಥ ವ್ಯಕ್ತಿಯೊಂದಿಗೆ ಮಕ್ಕಳ ಪಾಲನಾ ಕೇಂದ್ರಕ್ಕೆ ವಾಪಸ್ ಆಗಿದ್ದಳು. ಪರಿಚಯಸ್ಥ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ವಿಷಯ ಗೊತ್ತಾಗಿದ್ದು, ಮಕ್ಕಳ ಪಾಲನಾ ಕೇಂದ್ರದ ಸಿಬ್ಬಂದಿ ಗದಗ ಮಹಿಲಾ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯನ್ನು ವಿಚರಿಸಿದಾಗ ಪರಿಚಯಸ್ಥ ವ್ಯಕ್ತಿಯೇ ನೀಚ ಕೃತ್ಯವೆಸಗಿದ್ದಾಗಿ ತಿಳಿದುಬಂದಿದೆ. 35 ವರ್ಷದ ಮೂರು ಮಕ್ಕಳ ತಂದೆಯೇ ಬಾಲಕಿ ಮೇಲೆ ಅತ್ಯಾಚರ ಮಾಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ