Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಇದೆಂತ ವಿಚಿತ್ರ ಪ್ರಕರಣ!*: *ಮಹಿಳೆಯರ ನಗ್ನ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್*

ಮೂರು ಪ್ರಕರಣ ದಾಖಲು


ಪ್ರಗತಿವಾಹಿನಿ ಸುದ್ದಿ: ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವಿಡಿಯೋ ಕಾಲ್ ಮಾಡಿ ಮಹಿಳೆಯರ ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ.

Home add -Advt

ಈ ಬಗ್ಗೆ ಬೆಳಗಾವಿ ಸೈಬರ್ ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗಾವಿಯಲ್ಲಿಯೇ ಮೂರು ಪ್ರಕರಣಗಳು ನಡೆದಿವೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ವಾಟ್ಸಪ್, ಮೆಸೇಜ್ ಅಥವಾ ಕರೆ ಮಾಡಿ ಕ್ರೈಂ ಬ್ರ್ಯಾಂಚ್ ನಿಂದ ಅಥವಾ ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಒಂದು ಪ್ರಕರಣದಲ್ಲಿ ನಿಮ್ಮ ಹೆಸರು ತಳುಕುಹಾಕಿಕೊಂಡಿದೆ ವಿಚಾರಣೆ ನಡೆಸಬೇಕಾಗಿದೆ ಎಂದು ಬೆದರಿಸುತ್ತಾರೆ. ಹೀಗೆ ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿ ಕ್ಯಾಮರಾ ಮುಂದೆ ಬರುವಂತೆ ತಿಳಿಸುತ್ತಾರೆ. ಮಾತನಾಡುತ್ತಾ ಈ ವಿಚಾರ ಹೊರಗೆ ಯಾರಿಗೂ ಗೊತ್ತಾಗಬಾರದು ಗೊತ್ತಾದರೆ ನಿಮ್ಮ ಬಗ್ಗೆ ಕುಟುಂದವರಿಗೂ ತಿಳಿಸುತ್ತೇವೆ ಎಂದು ಹೆದರಿಸುತ್ತ ವಿಚಾರಣೆ ನೆಪದಲ್ಲಿ ಬಟ್ಟೆ ಕಳಚುವಂತೆ ಹೇಳಿ ನಗ್ನ ದೇಹಗಳ ಸ್ಕ್ರೀನ್ ಶಾಟ್ ಮೂಲಕ ರೆಕಾರ್ಡ್ ಮಾಡಿಕೊಂಡು ಬಳಿಕ ಕರೆ ಕಟ್ ಮಾಡಿ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ. ಇಂತಹ ಯಾವುದೇ ಕರೆಗಳು ಬಂದರು ಸಾರ್ವಜನಿಕರು ಎಚ್ಚರದಿಂದ ಇರಿ ಹಾಗೂ ತಕ್ಷಣ ದೂರು ನೀಡಿವಂತೆ ತಿಳಿಸಿದ್ದಾರೆ.

ಹೀಗೆ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಹ ಮೂರು ಪ್ರಕರಣ ದಾಖಲಾಗಿದೆ. ಒಂದು ವೇಳೆ ಯಾರಿಗಾದರೂ ಇಂತಹ ಕರೆ ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ ಎಂದು ತಿಳಿಸಿದ್ದಾರೆ.


Related Articles

Back to top button