ಕ್ರೀಡೆಯಿಂದ ಸದೃಢತೆ ಸಾಧಿಸಿ ಬಲಾಢ್ಯ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿ : ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರೀಡಾ ಮನೋಭಾವವನ್ನು ಚಿಕ್ಕ ವಯಸ್ಸಿನಲ್ಲೇ ಬೆಳೆಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗುವುದಲ್ಲದೇ ಸದಾ ಕ್ರಿಯಾಶೀಲರಾಗಿರುತ್ತಾರೆ” ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಹಲಗಾ ಗ್ರಾಮದ ಸರಕಾರಿ ಪೂರ್ವ ಪಾಥಮಿಕ ಮರಾಠಿ ಶಾಲೆಗೆ ಒದಗಿಸಿಕೊಟ್ಟ ನೂತನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಅವರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಗುರುವಾರ ಮಾತನಾಡಿದರು.
“ಪಾರಿವಾಳಗಳು ಶಾಂತಿಯ ಸಂಕೇತವಾಗಿದ್ದು, ಕ್ರೀಡೆಗಳು ಕೂಡ ಶಾಂತ ರೀತಿಯಿಂದ ನಡೆಯಬೇಕು ಎಂದ ಅವರು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸದೃಢ ಮನಸ್ಥಿತಿ, ದೇಹಸ್ಥಿತಿ ಹೊಂದಿ ಬಲಾಢ್ಯ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು” ಎಂದರು.
ಗ್ರಾಮದ ಹಿರಿಯರು, ಸದಾ ಬಿಳಗೋಜಿ, ಸಚಿನ್ ಸಾಮಜಿ, ಚಾರುಕೀರ್ತಿ ಸೈಬಣ್ಣವರ, ಮಹಾವೀರ ಬೆಲ್ಲದ, ಸುಕುಮಾರ ಹುಡೇದ, ಶಾಂತು ಬೆಲ್ಲದ, ರೂಪಾ ಸುತಾರ, ಸಂತೋಷ ಕೆ, ಭರತೇಶ ಬೆಲ್ಲದ, ಸಿದ್ದು ಕುರಂಗಿ, ಗಣಪತ ಮಾರಿಹಾಳ್ಕರ್, ಮಹಾವೀರ ಪಾಟೀಲ, ಶಿವಾಜಿ ಬಿಳ್ಗೊಜಿ, ಭುಜಂಗ ಸಾಲ್ಗಾಡೊ, ಚಂದ್ರಕಾಂತ ಕಾನೋಜಿ, ಅನ್ನಪ್ಪ ಘೋರ್ಪಡೆ, ಕೃಷ್ಣ ಸಂತಾಜಿ, ಸುರೇಶ ಬಿಳ್ಗೊಜಿ, ಸಿ.ಬಿ.ನಾಯ್ಕರ್, ಅನ್ವರ್ ಲಂಗೂಟಿ, ರಾಮು ಮೋರೆ, ಯು.ಎನ್. ಹಿರೇಮಠ, ಪ್ರಕಾಶ ಪಾಟೀಲ, ಎಸ್ ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು ಹಾಗೂ ಆಯಾ ಶಾಲೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
*ಟಿಕೆಟ್ ಗೊಂದಲದ ನಡುವೆಯೂ ಚುನಾವಣಾ ಪ್ರಚಾರ ಆರಂಭಿಸಿದ ಭವಾನಿ ರೇವಣ್ಣ; ಕುತೂಹಲ ಮೂಡಿಸಿದ ನಡೆ*
https://pragati.taskdun.com/bhavani-revannahasanaelection-campaign/
*ಇದನ್ನೇ ಬೇರೆಯವರು ಮಾಡಿದ್ರೆ ಹಿಂದು ವಿರೋಧಿ ಅಂತಾರೆ; ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯಾನಾ?*
https://pragati.taskdun.com/priyank-khargec-t-ravinon-vegtemple-visitattack/
*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಇಂಜಿನಿಯರ್*
https://pragati.taskdun.com/bescomengeneerlokayukta-arrrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ