Latest

ಗಂಧದಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ; ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಸಾಕ್ಷ್ಯಚಿತ್ರದ ಟ್ರೇಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಗಂಧದಗುಡಿ ಟ್ರೇಲರ್ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಗಂಧದಗುಡಿ ಅಪ್ಪು ಹೃದಯಕ್ಕೆ ಹತ್ತಿರ. ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ‌. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ ಎಂದು ಹೇಳಿದ್ದಾರೆ.

ಗಂಧದಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ‌ ಎಂಬ ಭರವಸೆ ಟ್ರೇಲರ್‌ನಲ್ಲಿ ಕಾಣುತ್ತದೆ. ಪುನೀತ್ ಪತ್ನಿ ಅಶ್ವಿನಿ ಹಾಗೂ ಅವರ ಪಿಆರ್ ಕೆ ಪ್ರೊಡಕ್ಷನ್ ಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

’ಗಂಧದಗುಡಿ’ ಕರ್ನಾಟಕ ನೈಸರ್ಗಿಕ ಸೌಂದರ್ಯಕ್ಕೆ ಗೌರವ; ಟ್ರೇಲರ್ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

https://pragati.taskdun.com/latest/gandadaguditrailerpm-moditweet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button