Kannada NewsKarnataka NewsLatest

ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ಮುಂದುವರಿಸಿರುವ ಗಣೇಶ ಹುಕ್ಕೇರಿ

ಚಿಕ್ಕೋಡಿ – ಚಿಕ್ಕೋಡಿ -ಸದಲಗಾ ಶಾಸಕ ಗಣೇಶ್  ಹುಕ್ಕೇರಿ ಬುಧವಾರ ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸಿದ್ದಲ್ಲದೆ, ಜನರಿಗೆ ಕೊರೋನಾ ವೈರಸ್ ಹರಡದಂತೆ ವಹಿಸಿಬೇಕಾದ ಎಚ್ಚರಿಕೆಗಳ ಕುರಿತು ತಿಳಿವಳಿಕೆ ನೀಡಿದರು.

ಜೊತೆಗೆ, ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

 ಪಟ್ಟಣಕೋಡಿ, ವಾಳಕಿ, ಯಾದ್ಯಾನವಾಡಿ, ಧುಳಗನವಾಡಿ ಗ್ರಾಮಗಳಿಗೆ ಗಣೇಶ ಹುಕ್ಕೇರಿ ಭೇಟಿ ನೀಡಿದರು.

ಈ ಗ್ರಾಮಗಳ ಜನರಿಗಾಗಿ ಸ್ವತಃ ತಾವೇ ಉಚಿತವಾಗಿ 8 ಸಾವಿರ ಮಾಸ್ಕ್ ಗಳನ್ನು ನೀಡಿ, ವ್ಯವಸ್ಥಿತವಾಗಿ ವಿತರಿಸುವಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಸೂಚಿಸಿದರು.

Home add -Advt

ಇದೇ ವೇಳೆ,  ಆಯಾ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ವೈದ್ಯರು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಜೊತೆ ಅಲ್ಲಿರುವ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸೂಕ್ತವಾದ ಪರಿಹಾರ ಸೂಚಿಸಿದರು.

ಕೊರೊನಾ (ಕೋವಿಡ್-19) ಮಹಾಮಾರಿ ಜಗತ್ತಿನ ಮೂಲೆ ಮೂಲೆಗೂ ಆವರಿಸುತ್ತಿದೆ. ಆದ್ದರಿಂದ  ಯಾರೂ ಕೂಡ ಮನೆಯಿಂದ ಹೊರಗಡೆ ಬರಬೇಡಿ. ಅವಶ್ಯಕವಾಗಿ ಹೋಗಲೇಬೇಕಾದರೆ ಮಾಸ್ಕ್ ಧರಿಸಿ ಮತ್ತು ಅಂತರವನ್ನು  ಎಂದು  ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ವಿನೋದ ಕಾಗೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button