Belagavi NewsBelgaum NewsKannada NewsKarnataka News

*ಗಣೇಶೋತ್ಸವ: ಪೆಂಡಾಲ ನಿರ್ಮಾಣಕ್ಕೆ ಪೂಜೆ ನೇರವೇರಿಸಿದ ಅನಿಲ ಬೆನಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವ ನಿಮಿತ್ಯ ಬೆಳಗಾವಿ ಚವ್ವಾಟ ಗಲ್ಲಿಯ ಪಂಚ ಕಮೀಟಿ, ಹಿರಿಯರು, ಗಣೇಶೋತ್ಸವ ಮಂಡಳ ಪದಾಧಿಕಾರಿಗಳು, ಗಣೇಶ ಭಕ್ತರು ಹಾಗೂ ರಹವಾಸಿಗಳ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಸಹಯೋಗದಲ್ಲಿ ಮೂಹೂರ್ತ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕರಾದ ಅನಿಲ ಬೆನಕೆ, ದೇಶಾದ್ಯಂತ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಹಾಗೂ ಮುಂಬೈ ನಂತರ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಆಚರಿಸುವುದು ಹೆಮ್ಮೆಯ ಸಂಗತಿ, ಬೆಳಗಾವಿ ಜನರು ತಮ್ಮ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವುದು, ನಮ್ಮ ಹಿಂದಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು. 

ಎಲ್ಲರಿಗೂ ಶುಭಾಷಯಗಳನ್ನು ತಿಳಿಸಿದ ಅವರು, ಯುವಕರು ಹಾಗೂ ಆಯೋಜಕರಿಗೆ ಪ್ರೋತ್ಸಾಹವನ್ನು ನೀಡಿದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಯಲು ನಮ್ಮ ಪದ್ಧತಿಯನ್ನು ನಡೆಸಿಕೊಂಡು ಹೊಗುತ್ತಿರುವ ಯುವಕರಿಗೆ ಮತ್ತು ಪಂಚ ಕಮೀಟಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಚವ್ವಾಟ ಗಲ್ಲಿಯ ಪಂಚ ಕಮೀಟಿ, ಸಮಾಜದ ಹಿರಿಯರು, ಗಣೇಶೋತ್ಸವ ಮಂಡಳ ಪದಾಧಿಕಾರಿಗಳು, ಹಾಗೂ ರಹವಾಸಿಗಳ ಉಪಸ್ಥಿತಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button