Belagavi NewsBelgaum NewsKannada NewsKarnataka NewsLatest

*ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನಿಸಿದ್ದ ಗ್ಯಾಂಗ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲೆಯನ್ನೆ ಬೆಚ್ಚಿ ಬಿಳಿಸಿದ ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಗನ್ ಸಮೇತ ಪೊಲೀಸರು ಬಂಧಿಸಿದ್ದಾರೆ.

ಅ. 26 ರಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ   ತ್ರೀಮೂರ್ತಿ ಜ್ಯುವೆಲರ್ ಗೆ ನುಗ್ಗಿ ದರೋಡೆಗೆ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿತು. ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ಬೆನ್ನು ಬಿದ್ದ ಬೆಳಗಾವಿ ಜಿಲ್ಲಾ ಪೊಲೀಸರು ಪ್ರಕರಣದ ಮುಖ್ಯ ಆರೋಪಿಗಳಾದ ವಿಜಯ್ ಜಾವೀದ್, ಯಶ್ವಂತ್ ಓಂಕಾರ್, ಹಣಮಂತ ವಾಂಡರೆ, ಸೂರಜ್ ನಾನಸೋ ಬೂದಾವಲೆ, ಭರತ ಚಂದ್ರಕಾಂತ ಕಾಟಕರ್  ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಕೃತ್ಯಕ್ಕೆ ಬಸಿದ ಎರಡು ಕಂಟ್ರಿ ಪಿಸ್ತೂಲ್,  ಏಳು ಜೀವಂತ ಗುಂಡು, ಬೈಕ್, ಕಾರು ವಶಕ್ಕೆ ಪಡೆಯಲಾಗಿದೆ. 

Home add -Advt

Related Articles

Back to top button