Kannada NewsKarnataka NewsNational

*ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ : ಕೋಲ್ಕತಾ ಯುವ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಡೆಹ್ರಾಡೂನ್‌ನಲ್ಲಿ ಪಂಜಾಬ್‌ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ ಆಗಸ್ಟ್ 13 ರಂದು ಬಾಲಕಿ ಮೊರಾದಾಬಾದ್‌ನಿಂದ ಯುಪಿ ರೋಡ್‌ವೇಸ್‌ ಬಸ್‌ಗೆ ಏರಿದ್ದಳು. ಬೆಳಗಿನ ಜಾವ 2.30 ರ ಸುಮಾರಿಗೆ ಡೆಹ್ರಾಡೂನ್ ತಲುಪಿದ್ದಳು.

ಬಸ್‌ ಖಾಲಿಯಾದ ಬಳಿಕ ಐವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಬಾಲಕಿಯನ್ನು ಬಸ್‌ನಿಂದ ಇಳಿಸಿ ಕಾಮುಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ

ಸದ್ಯ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ತಂಡದವರು ರಕ್ಷಿಸಿದ್ದು, ಅಪರಿಚಿತ ಆರೋಪಿಗಳ ವಿರುದ್ಧ ಪಟೇಲ್ ನಗರದ ಐಎಸ್‌ಬಿಟಿ ಪೋಸ್ಟ್, ಪೊಲೀಸ್‌ ಪೋಸ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Home add -Advt

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಾಲಕಿಯನ್ನು ಕೌನ್ಸೆಲಿಂಗ್‌ ಗೆ ಒಳಪಡಿಸಿದ್ದು, ಈ ವೇಳೆ ಬಾಲಕಿ ತಾನು ಪಂಜಾಬ್ ಮೂಲದವಳು ಎಂದು ಹೇಳಿದ್ದಾಳೆ.

ತಂದೆ ತಾಯಿ ತೀರಿ ಹೋಗಿದ್ದರು, ಬಳಿಕ ಸಹೋದರಿ ಮತ್ತು ಸೋದರ ಮಾವನ ಜೊತೆ ವಾಸಿಸುತ್ತಿದ್ದಳು. ಆದರೆ ಆಗಸ್ಟ್ 11 ರಂದು ಬಾಲಕಿಯನ್ನು ಸಹೋದರಿ ಹಾಗೂ ಮಾವ ಮನೆಯಿಂದ ಹೊರಹಾಕಿದ್ದಾರೆ ಎಂದು ಕೌನ್ಸೆಲಿಂಗ್ ವೇಳೆ ಬೆಳಕಿಗೆ ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button