LatestNational

*ಸೆಲ್ಪಿ ತೆಗೆಯುವ ವೇಳೆ ಗಂಗಾನದಿಯಲ್ಲಿ ಮುಳುಗಿ ಮೂವರ ಸಾವು*

ಪ್ರಗತಿವಾಹಿನಿ ಸುದ್ದಿ: ವಾರಣಾಸಿಯ ಸಾಮ್ನ ಘಾಟ್ ಬಳಿ ಸೆಲ್ಪಿ ತೆಗೆಯುವ ವೇಳೆ ಮಹಿಳೆ ಸೇರಿದಂತೆ ಮೂವರು ಗಂಗಾನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ 

ಬಿಹಾರದ ವೈಭವ್ ಸಿಂಗ್, ರಿಷಿ, ಸೋನಾ ಮೃತಪಟ್ಟವರು ಎಂದು ತಿಳಿದು ಬಂದಿದೆ.‌ ಮೂವರೂ ಪ್ರವಾಸಕ್ಕೆಂದು ಬಂದಿದ್ದರು. ಸಾಮ್ನ ಘಾಟ್ ಬಳಿ ಸೆಲ್ಪಿ ತೆಗೆದುಕೊಳ್ಳುವಾಗ ಸೋನಾ ನೀರಿಗೆ ಬಿದ್ದಿದ್ದಾಳೆ, ರಿಷಿ ಮತ್ತು ವೈಭವ್ ಅವಳನ್ನು ರಕ್ಷಿಸಲು ನೀರಿಗೆ ಹಾರಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಪೊಲೀಸರು ವೈಭವ್‌ ಮೃತದೇಹವನ್ನು ಹೊರತೆಗೆದಿದ್ದಾರೆ. ಇನ್ನೆರಡು ಶವಗಳಿಗಾಗಿ ಶೋಧ ನಡೆಯುತ್ತಿದೆ. ಈ ಮೂವರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ರಾತ್ರಿ ಘಾಟ್‌ನಲ್ಲಿದ್ದ ಜನರನ್ನು ವಿಚಾರಣೆ ನಡೆಸಿದ್ದಾರೆ.

Related Articles

Back to top button