Latest

ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಕುಖ್ಯಾತ ಗ್ಯಾಂಗ್ ಸ್ಟರ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕುಖ್ಯಾತ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್-ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ವಿಷಯವನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಮುಂಬೈಯಲ್ಲಿರುವ ಸಲ್ಮಾನ್ ಫಾರ್ಮ್ ಹೌಸ್ ತೆಕ್ಕೆಗೆ ಪಡೆಯುವ ಉದ್ದೇಶದಿಂದ ಬಿಷ್ಣೋಯ್ ತನ್ನ ಸಹಚರರನ್ನು ಬಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

Home add -Advt

ಬಿಷ್ಣೋಯ್ ಅಣತಿ ಮೇರೆಗೆ ಬಂದಿದ್ದ ಸಹಚರರು ಸಲ್ಮಾನ್ ಅಭಿಮಾನಿಗಳಂತೆ ನಟಿಸಿ ಫಾರ್ಮ್ ಹೌಸ್ ಸಿಬ್ಬಂದಿ ಜತೆ ಸ್ನೇಹ ಬೆಳೆಸಿದ್ದರು. ಸಲ್ಮಾನ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಅವರು ರಸ್ತೆಯಲ್ಲಿನ ಹೊಂಡಗಳನ್ನಾಧರಿಸಿ ಸಲ್ಮಾನ್ ಕಾರು ಗಂಟೆಗೆ 25 ಕಿ.ಮೀ. ವೇಗದಲ್ಲಿ ಚಲಿಸಬಹುದು ಎಂದು ಅಂದಾಜು ಕೂಡ ಹಾಕಿದ್ದರು.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅಲಿಯಾಸ್ ಶುಭದೀಪ್ ಸಿಂಗ್ ಸಿಧು ಹತ್ಯೆ ಪ್ರಕರಣದ ಪ್ರಮುಖ ಆರೋಪಿ  ಲಾರೆನ್ಸ್ ಬಿಷ್ಣೋಯ್ ಸದ್ಯ ಪಂಜಾಬ್ ಪೊಲೀಸರ ವಶದಲ್ಲಿದ್ದಾನೆ.

ಪ್ರಸ್ತುತ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಗೆ ಬಿಗಿ ಭದ್ರತೆ ಒದಗಿಸಿದ್ದು ಆಗಂತುಕರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಪೊಲೀಸರ ಕಿರಿಕುಳ; ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಯುವಕ

Related Articles

Back to top button