Belagavi NewsBelgaum NewsKannada News

ಗಾಂಜಾ ಮಾರಾಟಗಾರರ ಬಂಧನ

*ಹಿರೇಬಾಗೇವಾಡಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ; 

32580 ಮೌಲ್ಯದ  ಗಾಂಜಾ ಹಾಗೂ ಇತರೆ ವಸ್ತುಗಳ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರೆಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ನಾಳ ಗ್ರಾಮದ ಹತ್ತಿರ ಗಾಂಜಾ ಮಾರಾಟ ಮಾಡಲು ಬಂದ ಇಬ್ಬರ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆ, ಪೊಲೀಸ್ ಇಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

  1. ಭೀಮಪ್ಪ ಮರನಿಂಗಪ್ಪ ಕಲಕೇರಿ (26) ಸಾ. ಕಲ್ಲೂರ ತಾ.ಧಾರವಾಡ

2) ಶಿವಾನಂದ ನಾಗಪ್ಪ ಬುಡ್ರಕಟ್ಟಿ (21) ಸಾ. ಕಲ್ಲೂರ ತಾ.ಧಾರವಾಡ

Home add -Advt

ಇವರನ್ನು ಬಂಧಿಸಿ ಅವರಿಂದ ಒಟ್ಟು 2480ರೂ. ಮೌಲ್ಯದ 248 ಗ್ರಾಂ. ಗಾಂಜಾ ಹಾಗೂ 100 ರೂಪಾಯಿ ಹಣ ಹಾಗೂ 20,000 ಮೌಲ್ಯದ ಎರಡು ಮೋಬೈಲ್, ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಹೀಗೆ ಒಟ್ಟು -32580 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button