Latest

ಪ್ರೀತಿ ನಿರಾಕರಣೆ; ಪತ್ನಿಯ ತಂಗಿಗೆ ಚಾಕು ಇರಿದ ಭಾವ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ನಿಯ ತಂಗಿ ತನ್ನ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಗೆ 9 ಬಾರಿ ಚಾಕುವಿನಿಂದ ಇರಿದ ಭಾವ ಕೊನೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇರಿತಕ್ಕೆ ಒಳಗಾದ ನಾದಿನಿಯನ್ನು ಸಧ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆರೋಪಿ ನಾಗರಾಜ್ ಕೃತ್ಯದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ಯುವತಿ, ಆಕೆಯ ತಾಯಿ, ಅಕ್ಕ-ಭಾವ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅಕ್ಕನ ಗಂಡ ನಾಗರಾಜ್ ಆಗಾಗ ನಾದಿನಿಗೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಕಿರುಕುಳ ನೀಡುತ್ತಿದ್ದ. ಪತ್ನಿ ಮನೆಯಲ್ಲಿ ಇಲ್ಲದ ಸಮಯ ನೋಡಿ ನಾದಿನಿಗೆ ನಾಗರಾಜ್ ಪ್ರೇಮ ನಿವೇದನೆ ಮಾಡಿದ್ದಾನೆ. ಇದಕ್ಕೆ ತಿರಸ್ಕರಿಸಿದಾಗ ಕೋಪಗೊಂಡ ನಾಗರಾಜ್ ನಾದಿನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

Home add -Advt

Related Articles

Back to top button