Latest

ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮಸ್ಕಾರ; ಶಿವಲಿಂಗ ಸ್ಪರ್ಶಿಸಿ ವಿಸ್ಮಯಕ್ಕೆ ಸಾಕ್ಷಿಯಾದ ಸಂದರ್ಭ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ವಿಸ್ಮಯಕ್ಕೆ ಸಾಕ್ಷಿಯಾಯಿತು.

ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಪುಣ್ಯ ಪೂರ್ವ ಕಾಲದ ಸಂದರ್ಭದಲ್ಲಿ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಪ್ರತಿ ವರ್ಷ ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಕೊರೊನಾ ಕಾರಣದಿಂದಾಗಿ ಈಬಾರಿ ದೇವಾಲಯಕ್ಕೆ ಭಕ್ತರಿಗೆ ಅವಕಾಶವಿರಲಿಲ್ಲ.

ಇಂದು ಸಂಜೆ 5:15ಕ್ಕೆ ನಂದಿ ವಿಗ್ರಹದ ಮೂಲಕ ಹಾದು ಹೋದ ಸೂರ್ಯನ ಕಿರಣಗಳು ಪಾಣಿಪೀಠದ ಬಳಿಕ ಶಿವಲಿಂಗದ ಮೇಲೆ ಪ್ರಕಾಶಮಾನವಾಗುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಈ ವರ್ಷ ಶಿವಲಿಂಗಕ್ಕೆ ಸೂರ್ಯ ನಮಸ್ಕಾರದ ಬಗ್ಗೆ ವಿವರಿಸಿದ ಗವಿ ಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಕಳೆದ ವರ್ಷ ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸಲು ಸಾಧ್ಯವಾಗಿರಲಿಲ್ಲ. ಹಲವು ಅನಾಹುತಗಳು ಸಂಭವಿಸಿದವು. ಈ ವರ್ಷ ನಂದಿಯ ಎಡಭಾಗದ ಕಾಲನ್ನು ಮುಟ್ಟಿ ಕಿವಿಯಲ್ಲಿ ಬಂದು ಶೃಂಗದ ಮೂಲಕ ಗರ್ಭಗುಡಿ ಪ್ರವೇಶಿಸಿದೆ. ಸೂರ್ಯಭಗವಂತ ಶಿವನ ಪಾದ ಮುಟ್ಟಿ ಪಾರ್ವತಿ ಅನುಗ್ರಹ ಪಡೆದಿದ್ದಾರೆ. ಈ ವರ್ಷ ಸೂರ್ಯದೇವ ಎಲ್ಲರಿಗೂ ಒಳಿತು ಮಾಡಲಿದ್ದಾನೆ. 13 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಸಮಾಜಕ್ಕೆ ಪೂರ್ಣಾನುಗ್ರಹವಾಗಲಿದೆ. ಇದು ಶುಭ ಸೂಚನೆಯಾಗಿದೆ ಎಂದರು.
ಯಡೂರಿನ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button