*ಘಟಪ್ರಭಾ ನದಿಯಲ್ಲಿ ಮೀನುಗಳ ಮಾರಣಹೋಮ; ನೀರಿಲ್ಲದೇ ಸಾವನ್ನಪ್ಪಿದ ಜಲಚರಗಳು; ಗ್ರಾಮದತ್ತ ಸುಳಿಯದ ಅಧಿಕಾರಿಗಳು*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ನದಿ, ಜಲಾಶಯಗಳ ಒಡಲು ಸಂಪೂರ್ಣ ಬರಿದಾಗುತ್ತಿದ್ದು, ಹಲವೆಡೆಗಳಲ್ಲಿ ಜಲಚರಗಳು, ಮೀನುಗಳು ಸಾವನ್ನಪ್ಪಿವೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬಿತ್ತಿ ಹೋಗಿದ್ದು, ನೀರಿಲ್ಲದೇ ನದಿಯಲ್ಲಿನ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಗೋಕಾಕ್ ತಾಲುಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ, ಗ್ರಾಮಗಳಲ್ಲಿ ನದಿಯಲ್ಲಿ ಮೀನುಗಳು ಸಾವನ್ನಪ್ಪಿದ್ದು, ದುರ್ವಾಸನೆ ಬರುತ್ತಿದೆ. ನಲ್ಲಾನಟ್ಟಿ, ಬೊಳೋಬಾಳ ಗ್ರಾಮಗಳಲ್ಲಿ ರೋಗಗಳು ಹರಡುವ ಭೀತಿ ಎದುರಾಗಿದೆ. ಇಷ್ಟೆಲ್ಲ ಅವಾಂತರಗಳು ಸಂಭವಿಸಿದರೂ ಸ್ಥಳಕ್ಕೆ ಈವರೆಗೆ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಬಂದು ಪರಿಶೀಲನೆ ನಡೆಸಿಲ್ಲ. ನೀರಿಲ್ಲದೇ ಇಂದು ಜಲಚರಗಳು ಸಾವನ್ನಪ್ಪುತ್ತಿವೆ. ನಾಳೆ ಇದೇ ಸ್ಥಿತಿ ಜನರಿಗಾದರೂ ಅಚ್ಚರಿ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ