ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವತಿಯ ಮೇಲೆ ಪ್ರಿಯಕರ ಹಾಗೂ ಆತನ ಸ್ನೇಹಿತರೇ ಅತ್ಯಾಚಾರ ನಡೆಸಿರುವ ನೀಚ ಕೃತ್ಯ ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡದಲ್ಲಿ ನಡೆದಿದೆ.
ತುಮಕೂರಿನ ಕೊರಟಗೆರೆ ಮೂಲದ ಯುವಕ ಹಾಗೂ ಯುವತಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಕಳೆದವಾರ ಯುವತಿ ಭೇಟಿಯಾಗಿದ್ದ ಯುವಕ ಮೊಬೈಲ್ ಪಡೆದುಕೊಂಡಿದ್ದ. ಜುಲೈ 6ರಂದು ಯುವತಿ ಯುವತಿ ಕರೆ ಮಾಡಿ ತನ್ನ ಮೊಬೈಲ್ ತನಗೆ ಬೇಕು ವಾಪಸ್ ಕೊಡುವಂತೆ ಕೇಳಿದ್ದಳು. ಇದಕ್ಕೆ ಯುವಕ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ ಮೊಬೈಲ್ ಕೊಡುತ್ತೇನೆ ಎಂದು ಹೇಳಿದ್ದ.
ಯುವಕನ ಮಾತು ನಂಬಿ ಯುವತಿ ಮೆಜೆಸ್ಟಿಕ್ ಗೆ ಬಂದಿದ್ದಳೆ. ಆದರೆ ಯುವಕ ಆಕೆಗೆ ಮೊಬೈಲ್ ಕೊಡದೇ ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್ ಗೆ ಕರೆದುಕೊಂಡು ಹೋಗಿದ್ದ. ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಎಂದು ಹೇಳಿದ್ದಾಳೆ. ಮೊಬೈಲ್ ಕೊಡದೇ ಸತಾಯಿಸಿ ಯುವತಿ ಮೇಲೆ ಬಲವಂತವಾಗಿ ಯುವಕ ಅತ್ಯಾಚಾರವೆಸಗಿದ್ದಾನೆ. ನಂತರ ರೂಮಿಗೆ ಬಂದ ಯುವಕನ ಸ್ನೇಹಿತ ಕೂಡ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ.
ಯುವತಿಯ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ತಕ್ಷಣ ಸ್ಥಳೀಯರು ಗಿರಿನಗರ ಠಾಣೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಯುವತಿಯನ್ನು ರಕ್ಷಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
https://pragati.taskdun.com/heart-attackcpideath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ