
ಪ್ರಗತಿವಾಹಿನಿ ಸುದ್ದಿ; ಲಕ್ನೋ: ಮಹಿಳೆಯರಿಬ್ಬರು ಕಾಂಗ್ರೆಸ್ ಮುಖಂಡರೊಬ್ಬರನ್ನು ಹಿಡಿದು ಶರ್ಟ್ ಬಿಚ್ಚಿ ರಸ್ತೆ ಮಧ್ಯೆಯೇ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ತಮಗೆ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಯುವತಿಯರಿಬ್ಬರು ಸಾರ್ವಜನಿಕವಾಗಿ ಅನುಜ್ ಮಿಶ್ರಾಗೆ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಘಟನೆ ಬಳಿಕ ಪ್ರತಿಕ್ರಿಯಿಸಿರುವ ಅನುಜ್ ಮಿಶ್ರಾ ತನ್ನದು ಕಟ್ಟಡ ಉಪಕರಣಗಳ ಅಂಗಡಿಯಿದ್ದು, ಮಹಿಳೆಯರಿಬ್ಬರೂ ತಮ್ಮ ಅಂಗಡಿಯಿಂದ 2 ಲಕ್ಷದಷ್ಟು ವಸ್ತುಗಳನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ್ದಾರೆ. ಹಣ ಪಾವತಿಸುವಂತೆ ಕೇಳಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.
ಪ್ರಕರಣದ ಬಳಿಕ ಅನುಜ್ ಮಿಶ್ರಾ ಮಹಿಳೆಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.