Kannada NewsKarnataka NewsLatest

*ವ್ಯಕ್ತಿಗೆ ಚಾಕೋಲೇಟ್ ನೀಡಿ ಲೂಟಿ: ಕಾರವಾರ-ಮಂಗಳೂರು ರೈಲಿನಲ್ಲಿ ಘಟನೆ*

ಪ್ರಗತಿವಾಹಿನಿ ಸುದ್ದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಮತ್ತು ಬರುವ ಚಾಕೋಲೇಟ್ ನೀಡಿ 4. 86 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಕಾರವಾರದಿಂದ ಮಂಗಳೂರಿಗೆ ಹೊರಟ್ಟಿದ್ದ ರೈಲಿನಲ್ಲಿ ನಡೆದಿದೆ.‌

ಆ.10 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಹರೀಶ್ ಎಂಬುವವರು ಕಾರವಾರದಿಂದ ಮಂಗಳೂರಿಗೆ ರೈಲಿನ ಮೂಲಕ ಬರುತ್ತಿದ್ದರು. ಈ ವೇಳೆ ಭಟ್ಕಳದಲ್ಲಿ ರೈಲು ಹತ್ತಿದ್ದ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಹರೀಶ್ ಜೊತೆ ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಪರಿಚಯವಾದಾಗ ಕೆಲ ಹೊತ್ತು ತಮ್ಮ ತಮ್ಮ ಬಗ್ಗೆ ಇಬ್ಬರು ಹೇಳಿಕೊಂಡಿದ್ದಾರೆ. ಬಳಿಕ ಸ್ನೇಹದ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಚಾಕಲೇಟ್ ಅನ್ನು ಹರೀಶ್ ಗೆ ನೀಡಿದ್ದಾನೆ. ಅದನ್ನು ಸ್ವೀಕರಿಸಿದ ಹರೀಶ್ ಚಾಕೇಟ್ ಅನ್ನು ತಿಂದಿದ್ದಾನೆ.

ಚಾಕೋಲೇಟ್ ತಿಂದ ಕೆಲ ನಿಮಿಷದಲ್ಲೇ ಹರೀಶ್ ಗಾಢ ನಿದ್ದೆಗೆ ಜಾರಿದ್ದಾರೆ. ಹೀಗೆ ನಿದ್ದೆಗೆ ಜಾರಿದವರಿಗೆ ಬೆಳಗ್ಗೆಯೇ ಎಚ್ಚರವಾಗಿದ್ದು, ಕಣ್ಣು ಬಿಟ್ಟು ನೋಡಿದಾಗ ಕೈಯಲ್ಲಿದ್ದ ಬ್ಯಾಗು ಸೇರಿದಂತೆ ಕುತ್ತಿಗೆಯಲ್ಲಿದ್ದ ಸುಮಾರು 28ಗ್ರಾಂ ನ 2,35,000 ರೂ. ಬೆಲೆಬಾಳುವ ಸರ, 8 ಗ್ರಾಂ ತೂಕದ 70 ಸಾವಿರ ಬೆಲೆಬಾಳುವ ಉಂಗುರ, ವಾಚ್, ಮೊಬೈಲ್, ಪರ್ಸ್, ಹಾಗೂ ಬ್ಯಾಗ್ ನಲ್ಲಿದ್ದ 145,000 ರೂ. ನಗದನ್ನು ಕದ್ದು ಪರಾರಿಯಾಗಿದ್ದಾನೆ.

ನಗದು, ಸರ, ಉಂಗುರ ಸೇರಿದಂತೆ ಒಟ್ಟು 4,86,500 ರೂ. ಮೌಲ್ಯದ ಚಿನ್ನಾಭರಣ ವಸ್ತುಗಳನ್ನು ಅಪರಿಚಿತ ವ್ಯಕ್ತಿ ಕದ್ದೊಯ್ದಿದ್ದಾನೆ. ಸದ್ಯ ಈ ಪ್ರಕರಕ್ಕೆ ಸಂಬಂಧಪಟ್ಟಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Home add -Advt

Related Articles

Back to top button