*ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ; ಪ್ರಚಾರಕ್ಕೆ 20 ಕೊಟಿ, ಸಮಾವೇಶಕ್ಕೆ 74 ಕೋಟಿ ಖರ್ಚು*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಾಗತಿಕ ಬಂದವಾಳ ಹೂಡಿಕೆದಾರರ ಸಮಾವೇಶ ಆಯೋಜನೆಗೆ ತಗುಲಿದ ಖರ್ಚು ವೆಚ್ಚದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಪ್ರಚಾರದ ಜಾಹೀರಾತಿಗಾಗಿಯೇ 14 ಕೋಟಿ ಖರ್ಚಾಗಿದೆ. ಅಂತರಾಷ್ಟ್ರೀಯ ಪ್ರಚಾರ ಸಭೆಗೆ 3,27,91,178 ರೂ ಖರ್ಚಾಗಿದೆ. ರಾಷ್ಟ್ರೀಯ ಪ್ರಚಾರ ಸಭೆಗೆ 1,28, 11,962 ರೂ ಖರ್ಚಾಗಿದೆ ಎಂದು ವಿವರಿಸಿದರು.
ಬೆಂಗಳೂರು ಅರಮನೆ ಆವರಣದ ಜಾಗದ ಬಾಡಿಗೆಗೆ 1,27, 44,000 ಖರ್ಚಾಗಿದೆ. ಸಮಾವೇಶದ ಮೂಲ ಸೌಕರ್ಯ ಅಭಿವೃದ್ಧಿ, ಗಣ್ಯರಿಗೆ, ಸ್ಪೀಕರ್ ಗಳಿಗೆ ವಾಸ್ತವ್ಯ, ಸಾರಿಗೆ, ಅಂಚೆ, ಕೊರಿಯರ್, ಆಡಿಟ್ ಫೀ, ಊಟ, ಉಪಹಾರ ಸೇರಿದಂತೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಒಟ್ಟು 74,99,58,947 ರೂ ಖರ್ಚಾಗಿದೆ ಎಂದು ಅಂಕಿ-ಅಂಶಗಳ ಪ್ರಕಾರ ವಿವರಿಸಿದರು.
ಸಮಾವೇಶದ ಖರ್ಚು ವೆಚ್ಚದ ಕುರಿತ ಇನ್ನಷ್ಟು ವಿವರ ಈ ಕೆಳಗಿನಂತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ