GIT add 2024-1
Beereshwara 33

ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ: ರಾಹುಲ ಶಿಂಧೆ

Anvekar 3
Cancer Hospital 2


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಕ್ಕೋಡಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ನಿರ್ಭಿತಿಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಹೇಳಿದರು.

Emergency Service


ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ (ಮೇ.೪) ರಂದು ಜರುಗಿದ ಸುದ್ಧಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೇ ೭ ರಂದು ಬೆಳಗ್ಗೆ ೭ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಮತದಾನ ನಡೆಯಲಿದೆ. ಸಾರ್ವಜನಿಕರು ಪ್ರಜಾತಂತ್ರದ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಮತದಾರರ ವಿವರ:
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ೮,೮೫,೨೦೦ ಪುರುಷ, ೮,೭೬,೪೧೪ ಮಹಿಳಾ ಹಾಗೂ ಇತರೆ ೮೦ ಮತದಾರರು ಸೇರಿದಂತೆ ಒಟ್ಟು ೧೭,೬೧,೬೯೪ ಮತದಾರರಿತ್ತಾರೆ. ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೭,೩೬೭ ಪುರುಷ, ೧,೧೭,೩೯೬ ಮಹಿಳೆಯರು, ೭ ಇತರೆ ಮತದಾರರು ಸೇರಿದಂತೆ ಒಟ್ಟು ೨,೩೪,೭೭೦ಮತದಾರರಿತ್ತಾರೆ. ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ ೧,೧೬,೧೦೦ ಪುರುಷ, ೧,೧೬,೮೫೬ ಮಹಿಳಾ, ಇತರೆ ೧೪ ಸೇರಿದಂತೆ ಒಟ್ಟು ೨,೩೨,೯೭೦ ಮತದಾರರು, ಅಥಣಿ ಮತಕ್ಷೇತ್ರದಲ್ಲಿ ೧,೨೧,೪೨೬ ಪುರುಷ, ೧,೧೮,೨೧೬ ಮಹಿಳಾ, ಇತರೆ ೪ ಒಟ್ಟು ೨,೩೯,೬೪೬ ಮತದಾರರು, ಕಾಗವಾಡ ಮತಕ್ಷೇತ್ರದಲ್ಲಿ ೧,೦೩,೬೦೯ ಪುರುಷ, ೧,೦೧,೫೩೫ ಮಹಿಳಾ, ೦೮ ಇತರೆ ಸೇರಿದಂತೆ ಒಟ್ಟು ೨,೦೫,೧೫೨ ಮತದಾರರು, ಕುಡಚಿ ಮತಕ್ಷೇತ್ರದಲ್ಲಿ ೧,೦೩,೯೮೫ ಪುರುಷ, ೧,೦೦,೦೯೨ ಮಹಿಳಾ, ೧೮ ಇತರೆ ಸೇರಿದಂತೆ ೨,೦೪,೦೯೫ ಮತದಾರರು, ರಾಯಬಾಗ ಮತಕ್ಷೇತ್ರದಲ್ಲಿ ೧,೧೨,೭೨೪ ಪುರುಷ, ೧,೦೮,೫೯೧ ಮಹಿಳಾ, ಇತರೆ ೧೦ ಸೇರಿದಂತೆ ಒಟ್ಟು ೨,೨೧,೩೨೫ ಮತದಾರರು, ಹುಕ್ಕೇರಿ ಮತಕ್ಷೇತ್ರದಲ್ಲಿ ೧,೦೬,೮೧೬ ಪುರುಷ, ೧,೦೮,೩೮೭ ಮಹಿಳಾ, ೧೦ ಇತರೆ ಸೇರಿದಂತೆ ಒಟ್ಟು ೨,೧೫,೨೧೩ ಮತದಾರರು, ಯಮಕನಮರಡಿ ಮತಕ್ಷೇತ್ರದಲ್ಲಿ ೧,೦೩,೧೭೩ ಪುರುಷ, ೧,೦೫,೩೪೧ ಮಹಿಳಾ ಹಾಗೂ ೯ ಇತರೆ ಮತದಾರರು ಸೇರಿದಂತೆ ಒಟ್ಟು ೨,೦೮,೫೨೩ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಮತಗಟ್ಟೆಗಳ ವಿವರ:
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು ೧೮೯೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಿಪ್ಪಾಣಿ ವಿಧಾನ ಮತಕ್ಷೇತ್ರದಲಿಲ ೨೪೮, ಚಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದಲ್ಲಿ ೨೪೬, ಅಥಣಿ ೨೬೦, ಕಾಗವಾಡ ೨೧೯, ರಾಯಬಾಗ ೨೩೨, ಹುಕ್ಕೇರಿ ೨೨೪ ಹಾಗೂ ಯಮಕನಮರಡಿ ವಿಧಾನಸಭಾ ಮತಕ್ಷೇತ್ರದಲ್ಲಿ ೨೩೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಒಟ್ಟು ೧೮೯೬ ಮತಗಟ್ಟೆಗಳ ಪೈಕಿ ೨೫೭ ಮತಗಟ್ಟೆಗಳನ್ನು ಕ್ರಿಟಿಕಲ್, ೧೦೪ ವಲ್ನರೇಬಲ್ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ೯೪೮ ಮತಗಟ್ಟೆಗಳಿಗೆ ವೆಬಕಾಸ್ಟಿಂಗ್ ಹಾಗೂ ೧೮ ಮತಗಟ್ಟೆಗಳಲ್ಲಿ ವೀಡಿಯೋಗ್ರಾಫಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ೧೮೯೬ ಮತಗಟ್ಟೆಗಳಿಗೆ ಶೇ.೧೦ ರ? ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು ೮೭೯೨ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತಗಳಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ಇದರ ಜೊತೆಗೆ ೩೦೪ ಮೈಕ್ರೋ ಆಬ್ಸರ್ವರಗಳನ್ನು ನಿಯೋಜಿಸಲಾಗಿರುತ್ತದೆ. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ನಿಯೋಜಿತ ಮತಗಟ್ಟೆಗಳಿಗೆ ತೆರಳಲು ೪೦೮ ಮಾರ್ಗಗಳನ್ನು ಗುರುತಿಸಲಾಗಿದ್ದು, ೨೭೫ ಬಸ, ೨೮ ಜೀಪ್ ಹಾಗೂ ೧೧೭ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೪೦ ಸಖಿ ಮತಗಟ್ಟೆ, ವಿಕಲಚೇತನ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯನಿರ್ವಹಿಸುವ ೮, ಯುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸುವ ೮ ಹಾಗೂ ಅರಣ್ಯದ ಮಹತ್ವ ಸಾರುವ ೮ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ.
ಮತದಾನ ಪೂರ್ವ ೪೮ ಗಂಟೆಗಳ ಮಾರ್ಗಸೂಚಿಗಳು:
ಮೇ.೭ ರಂದು ಜರುಗಲಿರುವ ಮತದಾನಕ್ಕೂ ಮುನ್ನ ೪೮ ಗಂಟೆಗಳ ಅವಧಿಯಲ್ಲಿ ಎಲ್ಲ ರೀತಿಯ ಬಹಿರಂಗ ಚುನಾವಣಾ ಪ್ರಚಾರ ಸಭೆ ಹಾಗೂ ಧ್ವನಿ ವರ್ಧಕಗಳ ಬಳಕೆಯನ್ನು ನಿ?ಧಿಸಲಾಗಿರುತ್ತದೆ. ಕ್ಷೇತ್ರದ ಮತದಾರರಲ್ಲದ ತಾರಾ ಪ್ರಚಾರಕರು, ಇತರರು ಕ್ಷೇತ್ರದಿಂದ ಹೊರ ಹೊಗಬೇಕು ಮತಗಟ್ಟೆಗಳ ೧೦೦ ಮೀ. ಪರಿಮಿತಿಯೊಳಗೆ ನಿ?ಧಾಜ್ಞೆ ಜಾರಿಯಿದ್ದು ಚುನಾವಣಾ ಪ್ರಚಾರ ಅಥವಾ ಆಯುಧಗಳನ್ನು ಕೊಂಡೊಯ್ಯುವದನ್ನು ನಿ?ಧಿಸಲಾಗಿರುತ್ತದೆ. ಈ ಕುರಿತು ಎಫ್.ಎಸ್.ಟಿ. ತಂಡಗಳು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರ ನಿಗಾವಹಿಸುತ್ತಿರುತ್ತವೆ. ಚುನಾವಣೆ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಕೇಂದ್ರಗಳಿಗೆ ದೂರು ನೀಡಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಹಾಯವಾಣಿ ಕೇಂದ್ರಗಳು: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಜರುಗಿಸಲು ಚಿಕ್ಕೋಡಿ ಲೋಕಸಭ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಾಯವಾಣಿಗಳನ್ನು ತೆರೆಯಲಾಗಿದ್ದು ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯ ೦೮೩೩೮-೨೭೨೧೩೨, ೨೭೨೧೩೦, ೮೦೮೮೮೨೪೨೬೬ ನಿಪ್ಪಾಣಿ-೦೮೩೩೮-೨೨೦೦೩೦, ಚಿಕೋಡಿ-ಸದಲಗಾ- ೦೮೩೩೮-೨೭೨೧೩೦, ಅಥಣಿ-೦೮೨೮೯-೪೬೯೫೦೧, ಕಾಗವಾಡ-೦೮೩೩೯-೨೬೪೫೫೫, ಕುಡಚಿ-೯೮೪೫೯೮೬೧೦೫, ರಾಯಬಾಗ-೮೮೬೭೫೧೯೧೦೬, ಹುಕ್ಕೇರಿ-೦೮೩೩೩-೨೬೫೦೩೬, ಯಮಕನಮರಡಿ-೦೮೩೩೩-೨೦೦೩೦೮ ಹಾಗೂ ಚುನಾವಣಾ ಸಹಾಯವಾಣಿ ೧೯೫೦ ಗೆ ಕರೆ ಮಾಡಬಹುದಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುವ ಸುಳ್ಳು ಸುದ್ಧಿಗಳಿಗೆ ಕಿವಿಗೊಡದೆ ಯಾವುದೇ ಸಂದೇಹ ಅಥವಾ ಸಮಸ್ಯೆಗಳು ಇದ್ದಲ್ಲಿ ಸಹಾಯವಾಣಿ ಕೇಂದ್ರಗಳಿಗೆ ದೂರುಗಳನ್ನು ಸಲ್ಲಿಸುವಂತೆ ಹಾಗೂ ಪ್ರತಿಯೊಬ್ಬ ಅರ್ಹ ಮತದಾರರು ಮತದಾನದ ದಿನದಂದು ತಪ್ಪದೇ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಪೋಲಿಸ ಅಧೀಕ್ಷಕ ಆರ್.ಜಿ. ಬಸರಗಿ ಮಾತನಾಡಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಂತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಅಗತ್ಯದ ಭದ್ರತೆಗಾಗಿ ಒಟ್ಟು ೨೯೪೯ ಪೋಲಿಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ. ಇವರ ಜೊತೆಗೆ ಸಿ.ಎ.ಪಿ.ಎಫ್ ನ ೫ ತಂಡಗಳು ಹಾಗೂ ೪ ಕೆ.ಎಸ್.ಆರ್.ಪಿ. ತುಕುಡಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಬಕಾರಿ ಆಯುಕ್ತ ಟಿ. ಪ್ರಶಾಂತಕುಮಾರ ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2