Kannada NewsKarnataka NewsLatest

ಗೂಡ್ಸ್ ವಾಹನದಲ್ಲಿ ಗೋವಾದ ಮದ್ಯ ಸಾಗಾಟ: ಓರ್ವನ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕಣಕುಂಬಿ ಬಳಿಯ ಕರ್ನಾಟಕ-ಗೋವಾ ಗಡಿಯ ಚೆಕ್ ಪೋಸ್ಟ್ ಬಳಿ ಗೋವಾ ರಾಜ್ಯದ ಮದ್ಯವನ್ನು ಅನಧೀಕೃತವಾಗಿ ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆತನನ್ನು ಮಾಲುಸಮೇತ ಬಂಧಿಸಿದ್ದಾರೆ.
ಬಂಧಿತನನ್ನು ಗುಜರಾತ್ ರಾಜ್ಯ, ಅಹಮದಾಬಾದ್ ಜಿಲ್ಲೆಯ ರಣೀಫ್ ಗ್ರಾಮದ ನಿವಾಸಿ ಸೋಮಾಭಾಯಿ ಪಟೇಲ್ ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಗೋವಾ ರಾಜ್ಯದ ವಿವಿಧ ಕಂಪನಿಗಳು ತಯಾರಿಸಿದ ಒಟ್ಟು ೧೦೮೭.೨ ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಬಳಿಕ ಬಂಧಿತನನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Home add -Advt

ದಾಳಿಯಲ್ಲಿ ಬೆಳಗಾವಿ ಉಪ ವಿಭಾಗದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದು, ಸ್ಥಳೀಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಬಕಾರಿ ನಿರೀಕ್ಷಕ ಮಂಜುನಾಥ ಗಲಗಲಿ ಮಾಹಿತಿ ನೀಡಿದ್ದಾರೆ.

 

Related Articles

Back to top button