*ಹೈಫೈ ಕಾರಿನಲ್ಲಿ ಗೋವಾ ಮದ್ಯ ಸಾಗಾಟ: 50 ಬಾಕ್ಸ್ ಸೀಜ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ಅದ್ಧೂರಿಯಾಗಿ ತಯಾರಿ ಮಾಡಲಾಗಿದ್ದು, ಪೊಲೀಸರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅಹಿತಕರ ಘಟನೆ ನಡೆಯದಂತೆ ತಡೆಯಲು ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಆದರೆ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಿಸಲು ಯತ್ನಿಸಿ ಗ್ಯಾಂಗ್ ವಿಫಲವಾಗಿದೆ.
ಹೌದು.. ಬೆಳಗಾವಿಗೆ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯದಿಂದ ಪದೆ ಪದೆ ಅಕ್ರಮ ಮದ್ಯ ಸಾಗಾಟ ನಡೆಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂದು ಕೂಡ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಮದ್ಯ ಸಿಜ್ ಮಾಡಿದ್ದಾರೆ.
ಬೆಳಗಾವಿ ಗಡಿಯಲ್ಲಿರುವ ರಾಕಸಕೊಪ್ಪ ಡ್ಯಾಂ ಬಳಿ ಅಬಕಾರಿ ಪೊಲೀಸರು ಖಾಸಗಿ ವಾಹನದಲ್ಲಿ ನಿಂತಿದ್ದರು, ಕಾರಿನಲ್ಲಿ ಮದ್ಯ ಸಾಗಿಸುತ್ತಿದ್ದುದನ್ನು ನೋಡಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಬಾಳು ಸಾತೆರಿ ಎಂಬ ಆರೋಪಿ ಕಾರು ಬಿಟ್ಟು ಪರಾರಿಯಾಗಿದ್ದಾನೆ
ಕಾರಿನಲ್ಲಿ ಒಟ್ಟು 10 ಪ್ರಕಾರದ ಬ್ರ್ಯಾಂಡ್ ನ 50 ಬಾಕ್ಸ್ ಗಳು ಇದ್ದು, ಕರ್ನಾಟಕದ ಮದ್ಯದ ಬೆಲೆಯ ಪ್ರಕಾರ 5 ಲಕ್ಷ 63 ಸಾವಿರ ಆಗುತ್ತೆ. 3 ಲಕ್ಷ ಮೌಲ್ಯದ ಕಾರು ಹಾಗೂ 30 ಸಾವಿರ ಮೌಲ್ಯದ ಬೈಕ್ ಸೀಜ್ ಮಾಡಲಾಗಿದೆ. ಹೀಗೆ ಒಟ್ಟು 8 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.