
ಪ್ರಗತಿವಾಹಿನಿ ಸುದ್ದಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಗೋದಾವರಿ ನದಿಗೆ ಪುಣ್ಯ ಸ್ನಾನಕ್ಕೆ ಹೋಗಿದ್ದ ಐವರು ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಲ್ಲಪುಡಿಯಲ್ಲಿ ನಡೆದಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ 11 ಯುವಕರು ತಲ್ಲಪುಡಿಯಲ್ಲಿ ಮುಂಜಾನೆ ತೀರ್ಥ ಸ್ನಾನಕ್ಕೆಂದು ಇಳಿದಿದ್ದರು. ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಐವರು ನೀರುಪಾಲಾಗಿದ್ದರು. ಆರು ಯುವಕರು ಅಪಾಯದಿಂದ ಪಾರಾಗಿದ್ದರು. ಇದೀಗ ನೀರು ಪಾಲಾಗಿದ್ದ ಐವರು ಯುವಕರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಪಾದಲ ದುರ್ಗಾ ಪ್ರಸಾದ್ (19), ಪಾದಲ ಸಾಯಿ (19) ತಿರುಮಲಸೆಟ್ಟಿ ಪವನ್ (17), ಎ.ಪವನ್ (19) ಜಿ.ಆಕಾಶ್ (19) ಎಂದು ಗುರುತಿಸಲಾಗಿದೆ. ಯುವಕರು ತಲ್ಲಪುಡಿ ಮತ್ತು ರಾಜಮಹೇಂದ್ರವರಂ ನಲ್ಲಿ ಪದವಿ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ