Kannada NewsLatest

ಪರಶುರಾಮ ವಿಠಲ ಚೌಕಶಿ ನಿಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋಕಾಕ ಎಪಿಎಂಸಿ ಸದಸ್ಯರಾದ ಪರಶುರಾಮ ವಿಠಲ ಚೌಕಶಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಪರಶುರಾಮ ಅವರಿಗೆ 45 ವರ್ಷ ವಯಸ್ಸಾಗಿತ್ತು. ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದವರಾದ ಅವರು ಎರಡು ಬಾರಿ ಅರಭಾವಿ ಕ್ಷೇತ್ರದಿಂದ ಎಪಿಎಂಸಿಗೆ ಆಯ್ಕೆಯಾಗಿದ್ದರು.

Home add -Advt

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪರಶುರಾಮ ಚೌಕಶಿ ಅಂತ್ಯಕ್ರಿಯೆ ಇಂದು ರಾತ್ರಿ 9 ಗಂಟೆಗೆ ಬಡಿಗವಾಡ ಗ್ರಾಮದ ತೋಟದ ಮನೆಯಲ್ಲಿ ನೆರವೇರಲಿದೆ.

ಟ್ರಾನ್ಸ್ ಫಾರ್ಮರ್ ದುರಂತ ; ತಂದೆ, ಮಗಳು ದುರ್ಮರಣ; ಇಬ್ಬರು ಅಧಿಕಾರಿಗಳ ಬಂಧನ

Related Articles

Back to top button