
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ ಗ್ರಾಮೀಣ ಪಿಎಸ್ಐ ಫಕೀರಪ್ಪ ತಳವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮನೆಯಲ್ಲೇ ಮಲಗಿದ್ದಾಗ ಅವರು ಸಾವಿಗೀಡಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾತಂರಿಸಲಾಗಿದೆ.
3 ತಿಂಗಳ ಹಿಂದೆ ಪಿಎಸ್ಐ ಹುದ್ದೆಗೆ ಬಡ್ತಿ ಪಡೆದಿದ್ದ ತಳವಾರ ಅವರು ಕಳೆದ 7ನೇ ತಾರೀಕು ಅವರು ಮಹಾಲಿಂಗಪುರದಿಂದ ವರ್ಗಾವಣೆಯಾಗಿ ಗೋಕಾಕ ಗ್ರಾಮೀಣಕ್ಕೆ ಬಂದಿದ್ದರು. 1993ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಅವರು, ಝಳಕಿ, ಜಮಖಂಡಿ, ಕಲಾದಗಿ, ನವಣಗಾರ, ಕೆರೂರ್ ಮೊದಲಾದ ಕಡೆ ಅವರು ಕೆಲಸ ನಿರ್ವಹಿಸಿದ್ದರು. ಮೂಲತಃ ಬೀಳಗಿ ತಾಲೂಕಿನವರಾಗಿದ್ದರು.
ಪ್ರಾಣ ಬಿಟ್ಟೇವು; ಪಿಂಚಣಿ ಬಿಡೆವು: NPS ಹೋರಾಚಕ್ಕೆ ಮತ್ತೊಂದು ಬಲಿ
https://pragati.taskdun.com/one-more-employee-died-who-was-involved-in-nps-strike/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ