Kannada NewsKarnataka NewsLatest

ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣ: ಇಬ್ಬರು ವೈದ್ಯರು ಸೇರಿ ಮೂವರು ಅರೆಸ್ಟ್

*ಪಡೆದ ಹಣ ವಾಪಸ್ ಕೊಡುವುದಾಗಿ ಕರೆದುಸ್ನೇಹಿತನನ್ನೇ ಮರ್ಡರ್ ಮಾಡಿದ ಡಾಕ್ಟರ್*

 

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಇಲ್ಲಿನ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಮೂವರು ಆರೋಪಿತರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

Home add -Advt

ಪ್ರಥಮ ಆರೋಪಿ ಗೋಕಾಕ ಚನ್ನಮ್ಮನಗರ ನಿವಾಸಿ ಸಚಿನ್ ಶಂಕರ್ ಶಿರಗಾವೆ(36), ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ, ಹುಕ್ಕೇರಿ ತಾಲೂಕು ಶಿರಢಾಣ ಸಮೂಲದ  ಡಾ. ಶಿವಾನಂದ ಕಾಡಗೌಡ ಪಾಟೀಲ (28) ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ(25) ಬಂಧಿತರು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಂತೆ ಉಂಟಾಗಿದ್ದ ವೈಮನಸ್ಯದಿಂದ ರಾಜು ಅವರ ಮಿತ್ರ ಹಾಗೂ ವ್ಯವಹಾರದ ಪಾಲುದಾರನಾಗಿದ್ದ ಡಾ. ಸಚಿನ್ ಫೆ.10ರಂದು ರಾಜು ಅವರನ್ನು ಮೊಬೈಲ್ ಕರೆ ಮಾಡಿ ಕರೆಸಿದ್ದ. ನಂತರದಲ್ಲಿ ರಾಜು ಅವರು ನಾಪತ್ತೆಯಾಗಿದ್ದು ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಪೊಲೀಸರು ತನಿಖೆ ಕೈಗೊಂಡಾಗ ರಾಜು ಅವರು ಕೊನೆಯದಾಗಿ ಸ್ವೀಕರಿಸಿದ್ದ ಕರೆ
ಆಧರಿಸಿ ಡಾ. ಸಚಿನ್ ನನ್ನು ಬಂಧಿಸಿದ್ದರು. ಗುರುವಾರ ರಾತ್ರಿ ರಾಜು ಅವರ ಶವ ಪತ್ತೆಯಾಗಿದ್ದು ಈವರೆಗೆ ಮೂವರು ಆರೋಪಿತರನ್ನು ಬಂಧಿಸಿದಂತಾಗಿದೆ.

ಗೋಕಾಕ ಉದ್ಯಮಿ ಶವ ಪತ್ತೆ

https://pragati.taskdun.com/gokak-businessman-found-dead/

ಬೆಳಗಾವಿ: ಮತ್ತೊಂದು ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

https://pragati.taskdun.com/belgaum-dead-body-of-another-unidentified-person-was-found/

ಮಲಪ್ರಭಾ, ಘಟಪ್ರಭಾ ನದಿತೀರ ಅತಿಕ್ರಮಣ ತೆರವು: ಪ್ರಸ್ತಾವ ಸಲ್ಲಿಸಲು ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಸೂಚನೆ

https://pragati.taskdun.com/malaprabha-ghataprabha-riverside-encroachment-clearance-regional-commissioner-mg-hiremath-notice-to-submit-proposal/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button