Kannada NewsLatestNational

*ಏಕಾಏಕಿ ಕುಸಿದುಬಿದ್ದ ಮೆಟ್ರೋ ನಿಲ್ದಾಣ; ನಾಲ್ವರಿಗೆ ಗಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಮೆಟ್ರೋ ನಿಲ್ದಾಣದ ಭಾಗ ಕುಸಿದು ಬಿದ್ದು ದೆಹಲಿಯ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ದೆಹಲಿಯ ಗೋಕುಲಪುರಿ ಮೆಟ್ರೋ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಅವಶೇಷಗಳಡಿ ಓರ್ವ ಸಿಲುಕಿಕೊಂಡಿದ್ದಾನೆ. ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಉಳಿದವರಿಗೆ ವರು ಸಣ್ಣಪುಟ್ಟ ಗಾಯಗಳಾಗಿವೆ.

ಮೆಟ್ರೋ ರೈಲು ನಿಲ್ದಾಣದ ಒಂದು ಭಾಗವೇ ಸಂಪೂರ್ಣ ಕುಸಿದು ಬಿದ್ದಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button