Belagavi NewsBelgaum NewsKannada NewsKarnataka NewsNationalPolitics

*ಯುಗಾದಿ ದಿನವೇ ಸಿಹಿ ಸುದ್ದಿ ನೀಡಿದ ಚಿನ್ನ*

ಪ್ರಗತಿವಾಹಿನಿ ಸುದ್ದಿ : ಯುಗಾದಿ ಹಬ್ಬದ ದಿನದಂದು ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಜನರು ಸಂಭ್ರಮ ಹಾಗೂ ಸಡಗರದಿಂದ ಎಲ್ಲೆಡೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಹೀಗಿರುವಾಗಲೇ ಆಭರಣ ಖರೀದಿಸುವವರಿಗೆ ಶುಭ ಸುದ್ದಿ ಸಿಕ್ಕಿದೆ.

Home add -Advt

10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದ್ದು, ಆಭರಣ ಖರೀದಿಸುವವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

24 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2780 ರುಪಾಯಿ ಇಳಿಕೆ ಕಂಡಿದ್ದು, ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ ಗೆ 15,464 ರುಪಾಯಿಗೆ ಬಂದು ನಿಂತಿದೆ. 10 ಗ್ರಾಂ ಗೆ 1,54,640 ಆಗಿದೆ.

22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಕೂಡಾ ಭಾರೀ ಇಳಿಕೆ ಕಂಡಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2550 ರುಪಾಯಿ ಇಳಿಕೆ ಕಂಡಿದ್ದು, ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,175 ರುಪಾಯಿಗೆ ಇಳಿಕೆಯಾಗಿದೆ.

ಮುಂದಿನ ಮೂರು ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದು, ಹೂಡಿಕೆದಾರರಿಗೂ ಹೂಡಿಕೆಗೆ ಒಂದೊಳ್ಳೆ ಅವಕಾಶ ಎಂದು ಹೇಳಲಾಗುತ್ತಿದೆ.

Related Articles

Back to top button