ಪ್ರಗತಿವಾಹಿನಿ ಸುದ್ದಿ; ಪ್ರಿಟೋರಿಯಾ: ಆಫ್ರಿಕಾದ ಕಾಂಗೋ ರಾಜ್ಯದಲ್ಲಿ ಚಿನ್ನದ ಬೆಟ್ಟವೊಂದು ಪತ್ತೆಯಾಗಿದ್ದು, ಈ ಬೆಟ್ಟದ ಮಣ್ಣಿನಲ್ಲಿ ಅಪಾರ ಪ್ರಮಾಣದ ಚಿನ್ನದ ಅಂಶವಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜನರು ಚಿನ್ನಕ್ಕಾಗಿ ಮುಗಿಬಿದ್ದಿದ್ದಾರೆ.
ಕಾಂಗೋ ರಾಜ್ಯದ ಲೂಹಿಹಿಯಲ್ಲಿ ಈ ಬೆಟ್ಟ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಣ್ಣಿನ ಬೆಟ್ಟದಂತೆ ಕಾಣುವ ಈ ಬೆಟ್ಟದ ಮಣ್ಣಿನಲ್ಲಿ ಅಧಿಕ ಚಿನ್ನದ ಅಂಶವಿದೆ. ಇದರಿಂದಾಗಿ ಜನರು ಬೆಟ್ಟವನ್ನು ಅಗೆದು ಮಣ್ಣನ್ನು ಹೊತ್ತೊಯ್ಯುತ್ತಿದ್ದು, ಮಣ್ಣನ್ನು ತೊಳೆದು ಚಿನ್ನದ ಅಂಶಗಳನ್ನು ಸಂಗ್ರಹಿಸುತ್ತಿದ್ದಾರೆ.
ಸಾಗರೋಪಾದಿಯಲ್ಲಿ ಜನರು ಅಗಮಿಸಿ ಬೆಟ್ಟ ಅಗೆಯುತ್ತಿರುವುದನ್ನು ಕಂಡು ಸರ್ಕಾರ ಇದೀಗ ಬೆಟ್ಟಕ್ಕೆ ಜನರಿಗೆ ನಿಷೇಧ ಹೇರಿದೆ. ಯಾರೊಬ್ಬರೂ ಬೆಟ್ಟವನ್ನು ಅಗೆಯುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದೆ. ಬೆಟ್ಟದ ಮಣ್ಣಲ್ಲಿ ಅಷ್ಟು ಪ್ರಮಾಣದಲ್ಲಿ ಚಿನ್ನದ ಅಂಶ ಸಿಗುತ್ತಿರುವುದಾದರೂ ಹೇಗೆ ಎಂಬ ಬಗ್ಗೆ ತನಿಖೆಗೆ ಆದೇಶಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ