Latest

ಚಿನ್ನದ ಬೆಲೆ ಇನ್ನಷ್ಟು ಇಳಿಯುತ್ತಾ? ಹಾಗಂತಿದೆ ಮಾರ್ಕೆಟ್ ರಿಪೋರ್ಟ್

ಪ್ರಗತಿವಾಹಿನಿ ಸುದ್ದಿ, ಮುಂಬೈ – ದಿಢೀರ್ ಆಗಿ ಏರುತ್ತ ಸಾಗಿದ್ದ ಚಿನ್ನ ಒಮ್ಮಿಂದೊಮ್ಮೆಲೆ ಇಳಿಯುತ್ತ, ಚಿನ್ನ ಖರೀದಿಗಿದು ಚಿನ್ನದಂತಹ ಸಮಯ ಎನ್ನುವ ಭಾವನೆ ಮೂಡಿಸಿರುವ ಸಂದರ್ಭದಲ್ಲಿ ಮತ್ತೊಂದು ಖುಷಿಪಡುವಂತಹ ಸುದ್ದಿ ಬಂದಿದೆ.

ಪ್ರತಿ 10 ಗ್ರಾಂ ಚಿನ್ನಕ್ಕೆ 56000 ರೂ. ವರೆಗೆ ಏರಿಕೆ ಕಂಡಿದ್ದ ಚಿನ್ನ ಸಧ್ಯ 42000 ರೂ.ವರೆಗೂ ಬಂದು ನಿಂತಿದೆ. ಜಿಎಸ್ಟಿ ಮತ್ತಿತರ ಸೇರಿದಂತೆ ಸ್ವಲ್ಪಮಟ್ಟಿಗೆ ದರದಲ್ಲಿ ವ್ಯತ್ಯಾಸವಿರಬಹುದು. 5600 ರೂ. ದರವಿದ್ದಾಗ ಚಿನ್ನದ ವ್ಯಾಪಾರಿ ಬಳಿ, ಸ್ವಲ್ಪ ಚಿನ್ನ ಖರೀದಿಸಬೇಕಿತ್ತು. ಯಾವಾಗ ಇಳಿಯುತ್ತೆ ಎಂದು ಕೇಳಿದರೆ, ಇನ್ನು ಇಳಿಯುವ ಮಾತೇ ಇಲ್ಲ. ಇನ್ನೇನಿದ್ದರೂ ಏರುತ್ತಲೇ ಹೋಗುತ್ತದೆ. ಇದೇ ಚಿನ್ನ ಖರೀದಿಗೆ ಚಿನ್ನದಂತಹ ಸಮಯ ಎನ್ನುತ್ತಿದ್ದ.

ಈಗ 4200 ರೂ. ಬಂದಿದೆಯಲ್ಲ, ಇನ್ನೂ ಕಡಿಮೆಯಾಗುತ್ತಾ ಎಂದು ಕೇಳಿ ನೋಡಿ, ಅಯ್ಯೋ ಇಷ್ಟು ಯಾವತ್ತೂ ಇಳಿದಿರಲಿಲ್ಲ. ಇನ್ನು ಕೆಳಗೆ ಬರಲು ಸಾಧ್ಯವೇ ಇಲ್ಲ. ಚಿನ್ನ ಖರೀದಿಗೆ ಇಂತಹ ಚಿನ್ನದಂತಹ ಸಮಯ ಮತ್ತೆ ಬರದು ಎನ್ನುತ್ತಾನೆ.

ಹಾಗಾಗಿ ಚಿನ್ನ ಖರೀದಿಸಬೇಕೆಂದುಕೊಂಡವರಲ್ಲಿ ಫುಲ್ ಕನ್ಫ್ಯೂಷನ್, ಯಾವಾಗ ಖರೀದಿಸಬೇಕು ಎಂದು. ಹಿರಿಯರು ಹೇಳುವ ಪ್ರಕಾರ ಬೇಕೆಂದಾಗ, ಕೈಯಲ್ಲಿ ಖಾಸಿದ್ದಾಗಿ ಖರೀದಿಸಿಬಿಡಿ. ಕಾಯುತ್ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಬೇಕಾದರ ಒಮ್ಮೆಲೆ ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಬದಲು ಸ್ವಲ್ಪಸ್ವಲ್ಪವಾಗಿ ಖರೀದಿಸುತ್ತ ಹೋಗಿ.

Home add -Advt

ಇನ್ನು ಚಿನ್ನದ ಇಟಿಎಫ್ ಅಥವಾ ಬಾಂಡ್ ರೂಪದಲ್ಲಿ ಪ್ರತಿ ತಿಂಗಳು ಇಷ್ಟು ಎಂದು ಖರೀದಿಸುವುದೂ ಉತ್ತಮವೇ. ದರ ಏನೇ ಇರಲಿ, ಪ್ರತಿ ತಿಂಗಳು ಒಂದು ಗ್ರಾಮ್ ನಂತೆ ಖರೀದಿಸಿಬಿಡಿ ಎನ್ನುವವರೂ ಇದ್ದಾರೆ.

ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲ ಚಿನ್ನದ ದರ ಕುಸಿದಿದೆ. ಜೊತೆಗೆ ಭಾರತದ ರುಪಾಯಿ ದರವೂ ಅಮೇರಿಕಾದ ಡಾಲರ್ ಎದುರು ಸುಧಾರಿಸಿದೆ. ಅಲ್ಲದೆ ಶೇರ್ ಮಾರ್ಕೆಟ್ ಕೂಡ ಏರುಮುಖವಾಗಿಯೇ ಇದೆ. ಈ ಕಾರಣದಿಂದ ಚಿನ್ನದ ದರ ಕೆಳಗಿಳಿದಿದೆ. ಹಾಗಾಗಿ ಮತ್ತೆ ತಕ್ಷಣಕ್ಕೆ ಮೇಲೆ ಹೋಗುವ ಲಕ್ಷಣ ಇಲ್ಲ. ಇನ್ನೂ 200- 300 ರೂ. ಕಡಿಮೆಯೇ ಆಗಬಹುದು ಎನ್ನುತ್ತಾರೆ ತಜ್ಞರು.

ಆದರೆ ಚಿನ್ನ ಖರೀದಿಸಬೇಕೆಂದವರು ಇದೇ ಚಿನ್ನದಂತಹ ಸಮಯ ಎಂದು ಮುನ್ನುಗ್ಗುವುದು ಉತ್ತಮ. ನಿಮ್ಮ ಯೋಜನೆಯ ಅರ್ಧದಷ್ಟು ಈಗ ಖರೀದಿಸಿ ಇನ್ನರ್ಧಕ್ಕಾಗಿ ಸ್ವಲ್ಪ ದಿನ ಬೇಕಾದರ ಕಾಯಬಹುದು. ಆದರೆ ಒಮ್ಮೆ ಏರುಮುಖವಾದರೆ ಮತ್ತೆ ಕೈಗೆ ಸಿಗುವುದು ಕಷ್ಟ. ಹಾಗಾಗಿ ನಿಯಮಿತವಾಗಿ ಖರೀದಿಸುತ್ತಿರುವುದೇ ಎಲ್ಲ ದೃಷ್ಟಿಯಿಂದ ವಿಹಿತ.

ಪ್ರಗತಿವಾಹಿನಿ ಸಲಹೆ – ಚಿನ್ನ ಖರೀದಿಗೆ ಸಂಬಂಧಿಸಿದಂತೆ ಯಾರ ಸಲಹೆಯನ್ನೂ ಕೇಳದಿರುವುದೇ ಉತ್ತಮ. ಏಕೆಂದರೆ ಯಾರಿಗೂ ನಾಳೆ ಏನಾಗಲಿದೆ ಎನ್ನುವುದು ತಿಳಿಯುವುದಿಲ್ಲ. ಎಲ್ಲರೂ ಅವರ ಮನಸ್ಸಿಗೆ ತೋಚಿದ್ದನ್ನು ಹೇಳುವವರೇ. ಹಾಗಾಗಿ ನಿರ್ಣಯ ನಿಮ್ಮ ಸ್ವಂತದ್ದೇ ಆಗಿರಲಿ.

Related Articles

Back to top button